ಬೆಂಗಳೂರು: ಹಲವು ಸೀರಿಯಲ್ಗಳಲ್ಲಿ ನಟಿಸಿ ಫೇಮಸ್ ಆಗಿರುವ ನಟ ಚರಿತ್ ಬಾಳಪ್ಪ ಅವರನ್ನು ಅರೆಸ್ಟ್ ಮಾಡಲಾಗಿದೆ. ತನಗೆ ಪರಿಚಯವಿದ್ದ ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿರೋ ಆರೋಪ ಕೇಳಿ ಬಂದಿದೆ. ಪ್ರಕರಣ ದಾಖಲಿಸಿರುವ ಆರ್.ಆರ್ ನಗರ ಪೊಲೀಸರು ಚರಿತ್ ಬಾಲಪ್ಪ ಅವರನ್ನ ಬಂಧಿಸಿದ್ದಾರೆ. ಪ್ರೀತಿಸುತ್ತೇನೆ ಅಂತ ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯ, ಯುವತಿ ವಾಸ ಮಾಡುತ್ತಿದ್ದ ಮನೆಗೆ ನುಗ್ಗಿ ಸಹಚರರ ಜೊತೆ ಕಿರುಕುಳ ನೀಡದ ಆರೋಪ ಕೇಳಿ ಬಂದಿದೆ.
Advertisement
ನಟ ಚರಿತ್ ಯುವತಿ ಬಳಿ ಹಣಕ್ಕೂ ಬೇಡಿಕೆ ಇಟ್ಟಿದ್ದರಂತೆ. ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವಿಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದರಂತೆ. ಈ ಆರೋಪದ ಹಿನ್ನೆಲೆಯಲ್ಲಿ ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ, ಹಲ್ಲೆ ಆರೋಪವನ್ನ ಯುವತಿ ಮಾಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಆರ್.ಆರ್ ನಗರ ಪೊಲೀಸರು ಆರೋಪಿ ಚರಿತ್ ಬಾಲಪ್ಪ ಅವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.