ಯಾದಗಿರಿ:ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನಡುವೆ ಕಸರತ್ತು ಜೋರಾಗಿ ನಡೆದಿರುವ ಬೆನ್ನಲ್ಲೇ ಇತ್ತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಮಹಾಕುಂಭ ಮೇಳದಲ್ಲಿ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.
Advertisement
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಭಿಮಾನಿಗಳು ಪ್ರಯಾಗರಾಜನ್ ತ್ರೀವೇಣಿ ಸಂಗಮದಲ್ಲಿ ಸತೀಶ್ ಫೋಟೋ ಸಮೇತ ಮಿಂದೆದ್ದು ಹರಕೆ ಹೊತ್ತಿದ್ದಾರೆ. 2028 ಕ್ಕೆ ಸತೀಶ್ ಜಾರಕಿಹೊಳಿ ಸಿಎಂ ಆಗೇ ಆಗ್ತಾರೆ, ಸಿಎಂ ಆದ್ರೆ ಇದೆ ಸ್ಥಳಕ್ಕೆ ಬಂದು ಹರಕೆ ತೀರಿಸುವುದಾಗಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಭಿಮಾನಿಗಳು ಬೇಡಿಕೊಂಡಿದ್ದಾರೆ.