ಗದಗ: ಭಾರತೀಯ ಜನತಾ ಪಾರ್ಟಿಯ ರೋಣ ಮತ ಕ್ಷೇತ್ರದ ಮಾಜಿ ಸಚಿವ ಕಳಕಪ್ಪ ಬಂಡಿ ಅವರ 57 ನೇ ಹುಟ್ಟು ಹಬ್ಬವನ್ನು ನಗರದ ಸೇವಾ ಭಾರತಿ ಅರುಣೋದಯ ವಿಶೇಷ ಅಗತ್ಯವುಳ್ಳ ಶಾಲೆಯಲ್ಲಿ ವಿಕಲ ಚೇತನ ಮಕ್ಕಳೊಂದಿಗೆ ಸಿಹಿ ಹಂಚುವ ಮೂಲಕ ಮಾಜಿ ಆಚರಿಸಲಾಯಿತು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ ಮಾತನಾಡಿ, ಕಳಕಪ್ಪ ಬಂಡಿಯವರು ರೋಣ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ಕಳಕಪ್ಪ ಬಂಡಿ ಅವರ ಕನಸಾಗಿತ್ತು. ಈ ನಿಟ್ಟಿನಲ್ಲಿ ರೋಣ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ಡಿಜಿಟಲ್ ಕ್ಲಾಸ್ ರೂಂ ಉದ್ಘಾಟನೆ ಮಾಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದ ಪಲ್ಲೇದ, ಬಂಡಿ ಅವರ 57 ನೇ ಹುಟ್ಟು ಹಬ್ಬವನ್ನು ವಿಕಲ ಚೇತನ ಮಕ್ಕಳೊಂದಿಗೆ ಆಚರಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದಶೇಖರ ಬಾಗಲಕೋಟೆ, ಎಮ್ ಜಿ ಹೂಗಾರ, ಲುಕ್ಕಣಸಾ ರಾಜೋಳಿ, ಶಂಕರ್ ಬದಿ, ಸಂತೋಷ ಪಾಟೀಲ್, ಆಕಾಶ ಪಾಟೀಲ್, ಎಮ್ ವಿ ಅಕ್ಕಿ (ಶಿಕ್ಷಕರು), ಜೀತೇಂದ್ರ ಷಾ, ಪಂಚಾಕ್ಷರಿ ಅಂಗಡಿ, ಬಸವರಾಜ್, ಸಂಜೀವ ಕಬಾಡಿ, ಮೋಹನ ವರವಿ ಸೇರಿದಂತೆ ಹಲವರು ಹಾಜರಿದ್ದರು.
“ಜಿಲ್ಲೆಯಲ್ಲಿ ಅತಿ ಹಿಂದುಳಿದ ತಾಲೂಕುಗಳಾದ ಗಜೇಂದ್ರಗಡ, ಮುಂಡರಗಿ, ರೋಣ ಪಟ್ಟಣದ ಅಭಿವೃದ್ಧಿಗೆ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಕೊಡುಗೆ ಅಪಾರವಾಗಿದ್ದು, ಅವರ 57 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಈ ದಿನ ವಿಶೇಷ ಕಾರ್ಯಕ್ರಮಗಳನ್ನು ಅಭಿಮಾನಿಗಳೊಂದಿಗೆ ಹಮ್ಮಿಕೊಂಡಿದ್ದು, ಕಳಕಪ್ಪ ಬಂಡಿ ಅವರ ಕಾರ್ಯ ಸಮಾಜಮುಖಿ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ”
-ವಸಂತ ಪಡಗದ,
ಬಿಜೆಪಿ ಯುವ ಮುಖಂಡರು, ಗದಗ



