ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜೀವವಿಮಾ ನಿಗಮ ಗದಗ-1 ಶಾಖೆಯ ಕಾರ್ಯಾಲಯದಲ್ಲಿ ಸೇವಾ ಬಡ್ತಿ ಹೊಂದಿ ವರ್ಗಾವಣೆಗೊಂಡ ಉಪ ಶಾಖಾಧಿಕಾರಿ ಮಹಾಂತೇಶರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಎಲ್‌ಐಸಿ ಹಿರಿಯ ಶಾಖಾಧಿಕಾರಿ ಎಂ.ಎಚ್. ಭಜಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾಂತೇಶ ಅವರು ಅತಿ ಚಿಕ್ಕ ವಯಸ್ಸಿನಲ್ಲೇ ಮಾತೃ ಸಂಸ್ಥೆಗೆ ಒಳ್ಳೆಯ ಕೆಲಸ ಮಾಡಿ ಧಾರವಾಡ ವಿಭಾಗದಲ್ಲಿ ಗದಗ ಶಾಖೆಯನ್ನು ಉನ್ನತ ಮಟ್ಟದ ಸ್ಥಾನಕ್ಕೆ ಕೊಂಡೊಯ್ಯಲು ಹಗಲಿರಳು ಕೆಲಸ ಮಾಡಿದ್ದಾರೆ. ಸಂಸ್ಥೆ ಇವರ ಕಾರ್ಯವೈಖರಿಯನ್ನು ಮೆಚ್ಚಿ ಬೈಲಹೊಂಗಲ ಶಾಖೆಗೆ ವ್ಯವಸ್ಥಾಪಕರಾಗಿ ನೇಮಿಸಿದೆ. ಇವರ ಕಾರ್ಯ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಎಲ್‌ಐಸಿ ಪ್ರತಿನಿಧಿಗಳಾದ ಡಿ.ಸಿ. ಜವಳಿ, ಯಲ್ಲಪ್ಪ ಎಚ್.ಬಾಬರಿ, ಪ್ರಭು ರವದಿ, ಎಸ್.ಎಮ್. ಬಳಿಗಾರ, ಕೆ.ಪಿ. ಅಳವುಂಡಿ, ಜಿ.ಬಿ. ದೂಡ್ಡುರು, ಎನ್.ವಿ. ಮಾಳಿ, ಎಲ್.ಐ. ಪಿಡ್ಡನಗೌಡರ, ಎಂ.ಎಚ್. ಕುಂಬಾರ, ಭರಮಪ್ಪ ಸಾಲಿ, ರಾಜು ಕಾರಡಗಿ, ಡಿ.ಎಚ್. ಗೋಡಬಾಲಿ, ಮರಳುಸಿದ್ದಪ್ಪ ದೊಡ್ಡಮನಿ, ಈರಣ್ಣ ದೋಟಿಕಲ್ಲ, ರಾಜೇಶ್ವರಿ ಕಲಾಲ, ಜ್ಯೋತಿ ಹಾನಗಲ್ಲ ಮುಂತಾದವರಿದ್ದರು.