ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಆದಿಯೋಗಿ ಎಜುಕೇಶನಲ್ ಟ್ರಸ್ಟ್ನ ಇನ್‌ಸೈಟ್ ಅಕಾಡೆಮಿ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಮೈಲಾರಪ್ಪ ಮೆಣಸಗಿ ಪ.ಪೂ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿತು.
ನಿವೃತ್ತ ಪಾಂಶುಪಾಲರಾದ ಉಮೇಶ್ ಹಿರೇಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮಂಗಳೂರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಬಗ್ಗೆ ಮಾತನಾಡಿದರು. ಸೆನೆಟ್ ಚುನಾವಣೆಯಲ್ಲಿ ಅಧಿಕ ಮತಗಳಿಸಿ ಗೆಲುವು ಸಾಧಿಸಿದ್ದಕ್ಕಾಗಿ ಡಾ. ವಿರೇಶ ಹಂಚಿನಾಳರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟ್ಯಾಲೆಂಟ್ ಹಂಟ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ವಿತರಿಸಲಾಯಿತು. ಎಂ.ಎಂ.ಎಂ ಟ್ರಸ್ಟ್ನ ಕಾರ್ಯಾಧ್ಯಕ್ಷ ಡಾ. ಜಯದೇವ ಮೆಣಸಗಿ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ ಕಾಲೇಜಿನ ಲಿಂಗಮ್ಮ ರಶ್ಮಿ ಸಜ್ಜನ್‌ರವರಿಗೆ ಟ್ರಸ್ಟ್ನ ವತಿಯಿಂದ ನಗದು ಬಹುಮಾನವನ್ನು ನೀಡಿ ಅಭಿನಂದಿಸಿದರು.
ಪ್ರಾಚಾರ್ಯ ಶರತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇನ್‌ಸೈಟ್ ಅಕಾಡೆಮಿಯ ಸದಸ್ಯರಾದ ಎಸ್.ಜಿ. ಪಾಟಿಲ್, ಕುಮಾರ್ ರಾಥೋಡ್, ಪವನಕುಮಾರ್ ಶೇಠ್, ಸುನಿಲ್ ಯತ್ತಿನಮನೆ, ಪರಶುರಾಮ ಗುಡಿಮನಿ ಉಪಸ್ಥಿತರಿದ್ದರು. ವಾಸಿಮ್ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.