ನಿನ್ನೆ ಬೀಳ್ಕೊಡುಗೆ, ಇಂದು ಸಾವು: PSI ಪರಶುರಾಮ್ ಸಾವಿಗೆ ಕಾರಣವಾದ್ರಾ ಸ್ಥಳೀಯ MLA!?

0
Spread the love

ಯಾದಗಿರಿ:- ಯಾದಗಿರಿ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸೈ ಪರಶುರಾಮ ಸಾವಿನ ಪ್ರಕರಣ ಹಲವು ಅನುಮಾನಗಳಿಗೆ ಎಡಮಾಡಿಕೊಡಲಾಗಿದೆ.

Advertisement

ಕ್ಷಣಕ್ಷಣಕ್ಕೂ‌ ಪಿಎಸ್ಐ ಸಾವು ರೋಚಕತೆ ಪಡೆಯುತ್ತಿದ್ದು, ಸಾವಿಗೆ ಸ್ಥಳೀಯ ಶಾಸಕ ಹಾಗೂ ಪುತ್ರನ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಪೊಲೀಸ್ ಕ್ವಾರ್ಟರ್ಸ್‌ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಈ ಸಾವು ಅನುಮಾನ ಮೂಡಿಸಿದ್ದು, ಕುಟುಂಬಸ್ಥರನ್ನು ಶಾಕ್‌ಗೆ ದೂಡಿದೆ. ಪರಶುರಾಮ್‌ ಅವರ ಪತ್ನಿ ಗರ್ಭಿಣಿಯಾಗಿದ್ದು ತವರಿಗೆ ತೆರಳಿದ್ದವರು ಮರಳಿದ್ದಾರೆ.

ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ದಲಿತ ಸಂಘಟನೆಗಳು ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ.

ಈ ಕುರಿತು ಪರಶುರಾಮ್‌ ಅವರ ಪತ್ನಿ ಶ್ವೇತಾ ದೂರು ನೀಡಲು ಮುಂದಾಗಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಉಳಿದುಕೊಳ್ಳಲು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ಅವರು 30 ಲಕ್ಷ ರೂ. ಹಣ ಲಂಚ ನೀಡುವಂತೆ ಒತ್ತಾಯಿಸಿದ್ದರು. ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ರೂ. ಹಣ ನೀಡಿ ನಗರ ಠಾಣೆಗೆ ಪೋಸ್ಟಿಂಗ್ ಪಡೆದುಕೊಂಡಿದ್ದರು.

ಇದರಿಂದ ಸಾಲದ ಸುಳಿಗೆ ಸಿಲುಕಿದ್ದರು. ಇದೀಗ ‌ಮತ್ತೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದರು ಎಂದು ಶ್ವೇತಾ ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೂ ಪಿಎಸ್ಐ ಪರಶುರಾಮ್‌ ಫೋನ್‌ನಲ್ಲಿ ಮಾತಾಡಿದ್ದರು ಎಂದು ಪತ್ನಿ ಹೇಳಿದ್ದಾರೆ. ಸ್ಥಳಕ್ಕೆ ಶಾಸಕ ಬರುವಂತೆ ಪಿಎಸ್ಐ ಪತ್ನಿ ಪಟ್ಟು ಹಿಡಿದಿದ್ದು, ಅವರ ಗೋಳಾಟ ಕರುಳು ಚುರ್ ಎನ್ನುವಂತಿದೆ.

ನನ್ನ ಗಂಡನ ಸಾವಿಗೆ‌ ನ್ಯಾಯ ಸಿಗಬೇಕು, ಶಾಸಕ ಎಲ್ಲಿ ಕರಿರಿ ಎಂದು ಪತ್ನಿ ಗೋಳಾಡಿದ್ದಾರೆ. ಮಧ್ಯರಾತ್ರಿಯೂ ನನ್ನ ಗಂಡ ಎಸ್ಪಿ‌ ಮೇಡಂ ಪೋನ್ ಹಚ್ಚಿದ್ದರು ಅಂತ ಓಡುತ್ತಿದ್ದರು. ಈ ಸಾವಿಗೆ ನನ್ನ ಗಂಡ ಏನು ಅನ್ಯಾಯ ಮಾಡಿದ್ದರು. ಎಂಎಲ್ಎ ಬರುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಯಾದಗಿರಿ ಎಸ್ಪಿ ಜಿ.‌ಸಂಗೀತಾ ಎದುರು ಪತ್ನಿ ಶ್ವೇತಾ ಕಣ್ಣೀರಿಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here