ಟ್ರ್ಯಾಕ್ಟರ್‌ ಕೆಳಗೆ ಸಿಲುಕಿ ರೈತ ಸಾವು: ಉಳುಮೆ ವೇಳೆ ಅವಘಡ!

0
Spread the love

ಚಿಕ್ಕಬಳ್ಳಾಪುರ:- ಚೇಳೂರು ತಾಲ್ಲೂಕಿನ ದಿಗವಪ್ಯಯಲವಾರಪಲ್ಲಿ ಗ್ರಾಮದಲ್ಲಿ ಗದ್ದೆಯಲ್ಲಿ ಉಳುಮೆ ಮಾಡುವ ವೇಳೆ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ರೈತ ಮೃತಪಟ್ಟ ಘಟನೆ ಜರುಗಿದೆ.40 ವರ್ಷದ ಶಂಕರ್ ರೆಡ್ಡಿ ಮೃತ ದುರ್ದೈವಿ. ಶಂಕರ್‌ ರೆಡ್ಡಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತಾ ಕೆಸರು ಗದ್ದೆ ಉಳುಮೆ ಮಾಡುತ್ತಿದ್ದರು.

Advertisement

ಈ ವೇಳೆ ಕೆಸರಿನಲ್ಲಿ ಸಿಲುಕಿದ ಟ್ರ್ಯಾಕ್ಟರ್ ಮೇಲೆತ್ತಲು ಪ್ರಯತ್ನ ಪಟ್ಟಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಅದರ ಅಡಿ ಸಿಲುಕಿ ಮೃತಪಟ್ಟರು. ಅಲ್ಲಿದ್ದವರು ಸ್ಥಳೀಯರು ಜೆಸಿಬಿ ಮೂಲಕ ಟ್ರ್ಯಾಕ್ಟರ್‌ನಡಿಯಲ್ಲಿದ್ದ ಮೃತ ದೇಹವನನ್ನು ಹೊರತೆಗೆದಿದ್ದಾರೆ.

ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಚಿಕ್ಕಬಳ್ಳಾಪುರದ ಚೇಳೂರು ತಾಲೂಕು ದಿಗವ ಪ್ಯಯಲವಾರಪಲ್ಲಿ ದುರ್ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here