ಹುಬ್ಬಳ್ಳಿ:- ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಪೊಲೀಸರ ವಿಚಾರಣೆಗೆ ಹೆದರಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
48 ವರ್ಷದ ನಿಂಗಪ್ಪ ಅಂಗಡಿ(48) ಮೃತ ರೈತ. ಹೊಲದ ದಾರಿ ವಿಚಾರವಾಗಿ ಉಮಚಗಿ ಗ್ರಾಮದಲ್ಲಿ ಗಲಾಟೆಯಾಗಿದ್ದು, ಈ ಸಂಬಂಧ ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಲ್ಲದೆ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಪೊಲೀಸರು ಕರೆ ಮಾಡಿ ಸ್ಪೆಷನ್ಗೆ ಬರುವಂತೆ ಹೇಳಿದ್ದಾರೆ. ಇದರಿಂದ ಹೆದರಿದ ರೈತ ಜಮೀನಿನಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ.
ಎಸ್, ಜಮೀನು ಹಾದಿ ಸಂಬಂಧ ಉಮಚಗಿ ಗ್ರಾಮದಲ್ಲಿ ಜಗಳವಾಗಿದ್ದು, ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರು, ನಿಂಗಪ್ಪನನ್ನು ಕರೆಸಿ ಹಲ್ಲೆ ಮಾಡಿದ್ದಾರೆ. ಸಾಲದಕ್ಕೆ ಪಂಚಾಯಿತಿ ಸದಸ್ಯರು, ನಿಂಗಪ್ಪ ವಿರುದ್ಧ ಹುಬ್ಬಳ್ಳಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಈ ಪ್ರಕರಣ ಸಂಬಂಧ ಪೊಲೀಸರು ಸಹ ಎರಡ್ಮೂರು ದಿನಗಳಿಂದ ನಿಂಗಪ್ಪನಿಗೆ ಕರೆ ಮಾಡಿ ಠಾಣೆಗೆ ವಿಚಾರಣೆ ಬರುವಂತೆ ಸೂಚಿಸಿದ್ದಾರೆ.
ಇದರಿಂದ ತೀವ್ರ ಭಯಗೊಂಡ ರೈತ, ಜಮೀನಿಗೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಅಟ್ರಾಸಿಟಿ ಕೇಸ್ ದಾಖಲಿಸಿ ಇದೀಗ ಆತನನ್ನು ಬಲಿ ಪಡೆದುಕೊಂಡಿದ್ದಾರೆ.



