ರೈತರಿಗೆ ಸಿಗುತ್ತಾ ಗುಡ್ ನ್ಯೂಸ್!?: PM ಕಿಸಾನ್ ಯೋಜನೆಯ ಹಣ ಹೆಚ್ಚಳವಾಗುತ್ತಾ!?

0
Spread the love

ಕೇಂದ್ರ ಬಜೆಟ್ ಮಂಡನೆ ಆಗಲು ಕೆಲವೇ ದಿನ ಬಾಕಿ ಇದೆ. ಅನ್ನದಾತ ಎನಿಸಿರುವ ಕೃಷಿಕರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಗುರಿ ಇನ್ನೂ ಈಡೇರಿಲ್ಲ. 2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸುಮಾರು 10 ಕೋಟಿ ರೈತರನ್ನು ತಲುಪಿದೆ. ಇದು ಇನ್ನೂ ಬಹಳಷ್ಟು ಸಣ್ಣ ರೈತರನ್ನು ತಲುಪಬೇಕಿದೆ. ಯೋಜನೆ ಅಡಿ ಒಂದು ವರ್ಷದಲ್ಲಿ ನೀಡಲಾಗುತ್ತಿರುವ 6,000 ರೂ ಧನಸಹಾಯ ಸಾಲುವುದಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಮೊತ್ತವನ್ನು 8,000 ರೂಗೆ ಹೆಚ್ಚಿಸಬೇಕೆಂದು ಕೃಷಿ ತಜ್ಞರನೇಕರು ಸಲಹೆ ನೀಡಿದ್ದಾರೆ. ಸರ್ಕಾರ ಕೂಡ ಕಿವಿಗೊಟ್ಟು ಕೇಳಿಸಿಕೊಳ್ಳುತ್ತಿದೆ.

Advertisement

ಪ್ರತೀ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ಈ ಹಣ ಬಂದು ಬೀಳುತ್ತದೆ. ಸರ್ಕಾರ ಈವರೆಗೆ 17 ಕಂತುಗಳ ಹಣ ನೀಡಿದೆ. 3 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣವನ್ನು ಈ ಸ್ಕೀಮ್ನಲ್ಲಿ ಫಲಾನುಭವಿಗಳಿಗೆ ಈವರೆಗೆ ನೀಡಲಾಗಿದೆ. ಜೂನ್ ತಿಂಗಳಲ್ಲಿ 17ನೇ ಕಂತಿಗೆ ಸರ್ಕಾರ 20,000 ಕೋಟಿ ರೂಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿತ್ತು. ಒಂದು ವರ್ಷದಲ್ಲಿ ಸರ್ಕಾರ ಈ ಯೋಜನೆಗೆ 55,000 ಕೋಟಿ ರೂನಿಂದ 65,000 ಕೋಟಿ ರೂ ವ್ಯಯಿಸುತ್ತದೆ. ಯೋಜನೆ ಹಣವನ್ನು 8,000 ರೂಗೆ ಹೆಚ್ಚಿಸಿದಲ್ಲಿ ಇದು ವರ್ಷಕ್ಕೆ ಸುಮಾರು 20,000 ಕೋಟಿ ರೂ ಹೆಚ್ಚುವರಿ ಹೊರೆಯಾಗುತ್ತದೆ.

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವುದು ಹೇಗೆ?

  • ಮೊದಲಿಗೆ ಪಿಎಂ ಕಿಸಾನ್ ಸ್ಕೀಮ್ನ ವೆಬ್ಸೈಟ್ ಪ್ರವೇಶಿಸಿ. ಅದರ ವಿಳಾಸ: pmkisan.gov.in
  • ಇಲ್ಲಿ ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ.
  • ಇಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಟ್ಯಾಬ್ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು ಫೋನ್ ನಂಬರ್ ನೀಡಿ, ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ಸಲ್ಲಿಸಬೇಕು.
  • ನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ಇತ್ಯಾದಿ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.
  • ಪಿಎಂ ಕಿಸಾನ್ ಯೋಜನೆ ವೆಬ್ಸೈಟ್ನ ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿ
  • ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ದುಕೊಳ್ಳಿ.

Spread the love

LEAVE A REPLY

Please enter your comment!
Please enter your name here