ಪ್ರಕೃತಿಯ ಮಡಿಲಿನ ಕೂಸು
ಅರುಣೋದಯದೊಂದಿಗೆ ಕಾಯಕದ ರೇಸು
ಪೋಷಿಸುವವನು ಎತ್ತು, ಎಮ್ಮೆ, ಕರು, ಹಸು
ಅವಿಭಕ್ತ ಕುಟುಂಬದಲ್ಲಿ ರೈತರು ವಾಸು (1)
ಭೂತಾಯಿಯನ್ನು ನೆನೆದು ಎದ್ದು
ನಿರಂತರ ಕ್ರಿಯಾಶೀಲವೇ ಆರೋಗ್ಯದ ಮದ್ದು
ಪಶುಪಾಲನೆಯೊಂದಿಗೆ ಮಡದಿ ಮಕ್ಕಳ ಮುದ್ದು
ನೀ ಮಾದರಿ ಆಗಿರುವೆ ಇಡೀ ಜಗತ್ತನ್ನು ಗೆದ್ದು (2)
ಫಲವೇನು ಬಯಸದೆ ಬೆವರು ಸುರಿಸಿ
ಹಾಲು, ಮೊಸರು, ಮಜ್ಜಿಗೆ, ತುಪ್ಪ ಉಣಸಿ
ಸುತ್ತಮುತ್ತ ಗಿಡ ಮರ ಬಳ್ಳಿಗಳನು ಬೆಳೆಸಿ
ಋತುಮಾನಕ್ಕೆ ಅನುಗುಣವಾಗಿ ದೇಹವನ್ನು ದಣಿಸಿ (3)
ತಲೆಮಾರುಗಳಿಂದ ಸಾಗಿ ಬಂದ ಈ ಕಲೆ
ಸಹಸ್ರಾರು ಜೀವರಾಶಿಗೆ ಆಗಿದೆ ನೆಲೆ
ಮಣ್ಣಿನ ಮಕ್ಕಳಿಗೆ ಸಿಗಲಿ ಮೌಲ್ಯವಾದ ಬೆಲೆ
ತಮ್ಮ ಕಾಯಕದಲ್ಲಿ ಕಾಣುವರು ಆ ದೇವರ ಲೀಲೆ (4)
ಯುವಶಕ್ತಿಗೆ ಅರಿವಾಗಲಿ ನೇಗಿಲ ಶ್ರಮ
ಕೋಟಿವಿದ್ಯೆಗಿಂತ ಮೇಲು ಈ ಮೇಟಿಯ ಮರ್ಮ
ಈ ಮಣ್ಣಿನಲ್ಲಿ ಮಣ್ಣಾಗುವುದು ಸರ್ವರ ಜನ್ಮ
ನಿತ್ಯ ಕಾಯಕಯೋಗಿಗೆ ಸಿಗಲಿ
ಹೆಮ್ಮೆಯ ಅಭಿಮಾನ ಗೌರವದ ಸನ್ಮಾನ (5)
-ಸುವರ್ಣ ಮಾಳಗಿಮನಿ (ಬಸುಮಾ).
ಬಂಕಾಪುರ, ಶಿಗ್ಗಾವಿ.