ರೈತನ ವಿನೂತನ ಐಡಿಯಾ; ಡ್ರೋಣ್‌ ಬಳಸಿ ಬೆಳೆಗಳಿಗೆ ಔಷಧಿ ಸಿಂಪಡಣೆ..!

0
Farmers turn to drones to protect crops
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಸಾಲ-ಶೂಲ ಮಾಡಿ ಬಿತ್ತನೆ ಕೈಗೊಂಡು, ಫಸಲು ಕೈಗೆಟಕುವ ಸಂದರ್ಭದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿರುವ ರೈತ ವರ್ಗವು ಇದೀಗ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಯಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಇತ್ತೀಚೆಗೆ ಶಿರಹಟ್ಟಿ ತಾಲೂಕಿನ ಹೊಸೂರ ಗ್ರಾಮದಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಡ್ರೋಣ್ ಬಳಸಿಕೊಂಡು ಔಷಧಿ ಸಿಂಪರಣೆ ಮಾಡಿ ಗಮನ ಸೆಳೆದಿದ್ದಾರೆ.

Advertisement

ಶಿರಹಟ್ಟಿ ತಾಲೂಕಿನ ಹೊಸೂರ ಗ್ರಾಮದ ರಾಜು ಪಾಟೀಲ ಎಂಬುವರು ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ 10 ಎಕರೆ ಪ್ರದೇಶದ ತೊಗರಿ ಬೆಳೆ, 5 ಎಕರೆ ಪ್ರದೇಶದ ಶೇಂಗಾ ಬೆಳೆ, 8 ಎಕರೆ ಪ್ರದೇಶದ ಅಲಸಂದಿ ಬೆಳೆಗಳಿಗೆ ಡ್ರೋಣ್ ಬಳಸಿಕೊಂಡು ಔಷಧಿ ಸಿಂಪರಣೆಯನ್ನು ಮಾಡಿದ್ದಾರೆ. ಪ್ರತಿ ಎಕರೆಗೆ ಡ್ರೋಣ್ ಬಳಕೆ ಮಾಡುವುದಕ್ಕೆ 300ರೂ. ನೀಡಿದ್ದು 10-15 ನಿಮಿಷದಲ್ಲಿ ಒಂದು ಎಕರೆ ಪ್ರದೇಶಕ್ಕೆ ಔಷಧಿ ಸಿಂಪರಣೆ ಮಾಡುವ ಸಾಮರ್ಥ್ಯ ಡ್ರೋಣ್‌ಗಿದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗುವುದರ ಜೊತೆಗೆ ಕೂಲಿಕಾರ್ಮಿಕರ ಸಮಸ್ಯೆಯಿರುವ ಸ್ಥಳಗಳಲ್ಲಿ ರೈತರಿಗೆ ಇದು ಉಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡ್ರೋಣ್ ಬಳಸಿಕೊಂಡು ಔಷಧ ಸಿಂಪರಣೆ ಮಾಡುವುದರಿಂದ ಔಷಧವು ಮೇಲಿನಿಂದ ಕೆಳಕ್ಕೆ ಬೆಳೆಗಳಿಗೆ ಸಂಪೂರ್ಣವಾಗಿ ಸಿಂಪರಣೆಯಾಗಲಿದ್ದು, ತ್ವರಿತ ಗತಿಯಲ್ಲಿ ಬೆಳೆಗಳಿಗೆ ಆಗುವ ಹಾನಿಯನ್ನು ತಪ್ಪಿಸಬಹುದು.

ಜೊತೆಗೆ ಸಮಯದ ಉಳಿತಾಯವಾಗಲಿದೆ. ಆಗಿಂದಾಗ್ಗೆ ಆಗುವ ಪ್ರಕೃತಿ ವಿಕೋಪವನ್ನು ಗಮನದಲ್ಲಿಟ್ಟುಕೊಂಡು ಮುಂಜಾಗೃತೆಯಾಗಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಹಕಾರಿಯಾಗಲಿದೆ.

ರೈತಾಪಿ ವರ್ಗವು ಬಿತ್ತನೆ ಮಾಡಿದ ನಂತರ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಸಹ ಅಷ್ಟೇ ಪ್ರಮುಖವಾಗಿದ್ದು, ಕಾಲ ಬದಲಾದಂತೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ವಹಿಸಬೇಕಾದ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಬೆಳೆಗಳ ರಕ್ಷಣೆಗೆ ಮುಂದಾಗುವುದು ಅವಶ್ಯವಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಡವಿ ಗ್ರಾಮದ ಪ್ರಗತಿಪರ ರೈತ ರಾಜು ಪಾಟೀಲ, ಡ್ರೋಣ್ ಬಳಸಿ ಔಷಧ ಸಿಂಪರಣೆ ಮಾಡುವುದರಿಂದ ಬೆಳೆಗಳ ಎಲೆಗಳಿಗೆ ನೇರವಾಗಿ ಔಷಧ ಸಿಂಪರಣೆಯಾಗಲಿದೆ. ಸಮಯದ ಉಳಿತಾಯ, ಜೊತೆಗೆ ಪ್ರಕೃತಿ ವಿಕೋಪದಿಂದ ತ್ವರಿತ ಗತಿಯಲ್ಲಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here