ವಿಜಯಸಾಕ್ಷಿ ಸುದ್ದಿ, ಮುಳಗುಂದ: ಇಲ್ಲಿನ ಸೊರಟೂರ ಗ್ರಾಮದಲ್ಲಿ ಸೋಮವಾರ ಎಳ್ಳ ಅಮವಾಸ್ಯೆಯನ್ನು ರೈತ ಬಾಂಧವರು ಭೂತಾಯಿಗೆ ಚರಗ ಚೆಲ್ಲುವ ಮೂಲಕ ಸಡಗರ-ಸಂಭ್ರಮದಿಂದ ಆಚರಿಸಿದರು.
Advertisement
ಹಿಂಗಾರು ಬೆಳೆಗಳಿಂದ ಭೂತಾಯಿ ಹಸಿರು ಉಡುಗೆಯಿಂದ ಕಂಗೋಳಿಸುತ್ತಿದ್ದು, ಸಮೃದ್ಧಿಯ ಬೆಳೆ ನೀಡು ತಾಯಿ ಎಂದು ರೈತ ಬಾಂಧವರು ಕುಟುಂಬ ಸಮೇತ ಹೋಲಗಳಿಗೆ ತೆರಳಿ ಭೂತಾಯಿಗೆ ನೈವೇದ್ಯ ಮಾಡಿ ಪಂಚ ಪಾಂಡವರ ಕಲ್ಲುಗಳಿಗೆ ಹಾಗೂ ಬನ್ನಿ ಮರಕ್ಕೆ ವಿಶೇಷ ಪೂಜೆಗೈದು ಕುಟುಂಬ ಸಮೇತ ಭೋಜನ ಮಾಡಿ ಸಂಭ್ರಮಿಸಿದರು.