ಟೆಹ್ರಾನ್:- ಪ್ರಾಂತ್ಯದ ರಾಜಧಾನಿಯಾದ ದಕ್ಷಿಣ ಶಿರಾಜ್‌ನಲ್ಲಿ ಬಸ್ ಉರುಳಿಬಿದ್ದು 21 ಮಂದಿ ಸಾವನ್ನಪ್ಪಿದ್ದು, 34 ಜನರು ಗಾಯಗೊಂಡಿರುವ ಘಟನೆ ಜರುಗಿದೆ.
Advertisement
ಈ ಬಗ್ಗೆ ಫಾರ್ಸ್ ಪ್ರಾಂತ್ಯದ ತುರ್ತು ಸಂಸ್ಥೆಯ ಮುಖ್ಯಸ್ಥ ಮಸೌದ್ ಅಬೆದ್ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಅಪಘಾತದ ಕಾರಣ ಇನ್ನೂ ತನಿಖೆಯಲ್ಲಿದೆ. ಅಪಘಾತವು ಬೆಳಿಗ್ಗೆ 11.05ರ ಸುಮಾರಿಗೆ ಸಂಭವಿಸಿದೆ. ರಕ್ಷಣಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಲಾಗಿದ್ದು, ಅಪಘಾತದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ.
ಕಾರ್ಯಾಚರಣೆ ಪೂರ್ಣಗೊಂಡ ನಂತರ ಮತ್ತು ವಿವರವಾದ ತನಿಖೆ ನಡೆಸಿದ ನಂತರ ಹೆಚ್ಚುವರಿ ಮಾಹಿತಿ ಮತ್ತು ಅಂತಿಮ ಸಾವಿನ ಸಂಖ್ಯೆಯನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.


