ಚಾಮರಾಜನಗರ: ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಯಳಂದೂರು ಮಾರ್ಗಮಧ್ಯದ ಎಳೆ ಪಿಳ್ಳಾರಿ ದೇವಸ್ಥಾನದ ಬಳಿ ಜರುಗಿದೆ.
Advertisement
22 ವರ್ಷದ ಸುಮಂತ್, 16 ವರ್ಷದ ನಿತಿನ್ ಕುಮಾರ್ ಸಾವನ್ನಪ್ಪಿದ ದುರ್ದೈವಿಗಳು. ಲಾರಿಗೆ ಟೊಮ್ಯಾಟೊ ತುಂಬಿಕೊಂಡು ಹೋಗುತ್ತಿದ್ದ ಆಟೋ ಡಿಕ್ಕಿ ಹೊಡೆದಿದೆ. ಅಪಘಾತವಾಗುತ್ತಿದ್ದಂತೆ ರಸ್ತೆಗೆ ಟೊಮ್ಯಾಟೊ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.