ಹುಬ್ಬಳ್ಳಿ:- ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಓರ್ವ ಕನ್ನಡಿಗ ಸೇರಿ 45 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿಯ ಅಬ್ದುಲ್ ಘಣಿ ಶಿರಹಟ್ಟಿ (55) ಮೃತ ಕನ್ನಡಿಗ. ದುಬೈನಲ್ಲಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ದುಬೈನಿಂದ ಸೌದಿಗೆ ಉಮ್ರಾಗೆ ಹೋಗಿದ್ದರು. ಎರಡು ತಿಂಗಳ ಅಬ್ದುಲ್ ಘಣಿ ಹಿಂದೆ ದುಬೈಗೆ ಹೋಗಿದ್ದರು. ನ.9 ರಂದು ದುಬೈನಿಂದ ಸೌದಿಗೆ ಹೋಗಿದ್ದರು. ಅಬುದಾಬಿ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಡ್ರೈವರ್ ಕೂಡ ಆಗಿದ್ದರು.
ಈಗ ಸೌದಿಯಲ್ಲಿ ಹುಬ್ಬಳ್ಳಿ ನಿವಾಸಿ ಅಬ್ದುಲ್ ಅವರ ಮೃತದೇಹ ಇದೆ. ಹೀಗಾಗಿ, ತಮ್ಮನ್ನು ಸೌದಿಗೆ ಕಳುಹಿಸುವಂತೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಅಬ್ದುಲ್ ಅವರ ಮಕ್ಕಳಾದ ಅಂಜುಮ್, ಮೌಲಾಲಿ, ನಫಿಸಾ, ರೇಷ್ಮಾ, ಹೆಂಡತಿ ಜಬಿನಾ ಅಳಲು ತೋಡಿಕೊಂಡಿದ್ದಾರೆ.
ಹುಬ್ಬಳ್ಳಿ ಗಣೇಶ ಪೇಟೆಯ ಶೆಟ್ಟರ್ ಓಣಿಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಂದೆ ಮುಖ ನೋಡಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.



