ಧಾರವಾಡ:– ಬೆಟ್ಟಿಂಗ್ ಆಡಬೇಡ ಎಂದು ತಂದೆ ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದು ಮಗ ಸೂಸೈಡ್ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯ ಶಿವಳ್ಳಿ ಗ್ರಾಮದಲ್ಲಿ ಜರುಗಿದೆ.
Advertisement
ವಿನಯ ಹಡಪದ (16) ನೇಣಿಗೆ ಶರಣಾಗಿರುವ ಬಾಲಕ. ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಮಗನಿಗೆ ತಂದೆ ಬುದ್ಧಿ ಹೇಳಿದ್ದ. ಬೆಟ್ಟಿಂಗ್ ಚಟ ಬಿಟ್ಟು ಬಿಡುವಂತೆ ತಂದೆಯು ಮಗನಿಗೆ ತಿಳಿಹೇಳಿದ್ದರು. ಇದರಿಂದ ಮನನೊಂದ ಅಪ್ರಾಪ್ತ ಬಾಲಕ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಘಟನೆ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.