ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ತಾಲೂಕಿನ ದುಗ್ಗಾವತಿ ಗ್ರಾಮದ ಹಲಗಿ ರಮೇಶ (38) ಹಾಗೂ ಹಲಗಿ ಚಂದ್ರು (15) ಕುರಿಯನ್ನು ಮೇಯಿಸುತ್ತಾ ಸಮೀಪದ ಶಾಮನೂರು ಶುಗರ್ ಕಾರ್ಖಾನೆಯ ಪಕ್ಕದ ಅಡಿಕೆ ಜಮೀನಿನ ತಂತಿ ಬೇಲಿ ಬಳಿ ಹೋಗಿದ್ದಾಗ ವಿದ್ಯುತ್ ಸ್ಪರ್ಶವಾಗಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
Advertisement
ರೈತರ ಜಮೀನಿನ ವಿದ್ಯುತ್ ಕಂಬದ ತಂತಿಯ ಮೇಲೆ ಶಾಮನೂರು ಶುಗರ್ ಕಾರ್ಖಾನೆಯ ಸಿಬ್ಬಂದಿಗಳು ಬೇರೊಂದು ದಪ್ಪನೆಯ ಸಿಲ್ವರ್ ತಂತಿಯನ್ನು ಎಸೆದಿದ್ದು, ಉಳಿದ ತಂತಿಯನ್ನು ಜಮೀನಿನ ತಂತಿಬೇಲಿಗೆ ಸುತ್ತಿದ್ದರು. ಆಗತಾನೆ ಮಳೆ ಸುರಿದು ನಿಂತಿದ್ದು, ಭೂಮಿಯು ಹಸಿಯಾಗಿದ್ದರಿಂದ ನೆಲಕ್ಕೆ ವಿದ್ಯುತ್ ಪ್ರವಹಿಸಿ, ಅಲ್ಲಿಯೇ ಇದ್ದ ತಂದೆ-ಮಗ ಇಬ್ಬರೂ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.