ಸ್ವೀಟ್ ನಲ್ಲಿ ವಿಷಬೆರೆಸಿ ಅಂಗವಿಕಲ ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡ ತಂದೆ!

0
Spread the love

ನವದೆಹಲಿ:- ದೆಹಲಿಯ ರಂಗಪುರಿ ನಗರದಲ್ಲಿ ತನ್ನ ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಬೆರೆಸಿ, ಜೊತೆಗೆ ತಂದೆಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

Advertisement

ಹೀರಾಲಾಲ್ ಶರ್ಮಾ ಹಾಗೂ ತನ್ನ ನಾಲ್ಕು ವಿಶೇಷಚೇತನ ಮಕ್ಕಳಾದ 26 ವರ್ಷದ ನೀತು, 24 ವರ್ಷದ ನಿಕ್ಕಿ ನೀರು, 23 ವರ್ಷದ ಮತ್ತು 20 ವರ್ಷದ ನಿಧಿ ಎಂದು ಗುರುತಿಸಲಾಗಿದೆ. ಇಬ್ಬರು ವಿಶೇಷಚೇತನ ಮಕ್ಕಳು ಹಾಗೂ ಇನ್ನುಳಿದ ಇಬ್ಬರಿಗೆ ಅಂಗವೈಕಲ್ಯದಿಂದಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ದೆಹಲಿಯ ನೈರುತ್ಯ ಉಪ ಪೊಲೀಸ್ ಆಯುಕ್ತ ರೋಹಿತ್ ಮೀನಾ ಮಾತನಾಡಿ, ಕಟ್ಟಡದ ಮಾಲೀಕ ನಿತಿನ್ ಚೌಹಾಣ್ ಎಂಬಾತ ಕರೆ ಮಾಡಿ, ಹೀರಾಲಾಲ್ ಮನೆಯ ಬಳಿ ದುರ್ವಾಸನೆ ಬರುತ್ತಿರುವುದಾಗಿ ಶುಕ್ರವಾರ ಬೆಳಿಗ್ಗೆ 10:18ರ ಸುಮಾರಿಗೆ ವಿಷಯ ತಿಳಿಸಿದ್ದಾರೆ ಎಂದು ಹೇಳಿದರು.

ಫ್ಲಾಟ್‌ನ ಬಾಗಿಲಿನ ಒಳಗಿನಿಂದ ಚಿಲಕ ಹಾಕಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ತೆಗೆಯಿಸಲಾಗಿದೆ. ಫ್ಲಾಟ್‌ನಲ್ಲಿ ಎರಡು ಕೊಠಡಿಗಳಿದ್ದು, ಒಂದು ಕೋಣೆಯಲ್ಲಿ ತಂದೆಯ ಶವ ಹಾಗೂ ಇನ್ನೊಂದು ಕೋಣೆಯಲ್ಲಿ ಆತನ ನಾಲ್ಕು ಮಕ್ಕಳ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಒಂದು ವರ್ಷದ ಹಿಂದೆಯಷ್ಟೇ ಆ ನಾಲ್ಕು ಮಕ್ಕಳು ಕ್ಯಾನ್ಸ್‌ರ್‌ನಿಂದಾಗಿ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ತನ್ನ ಹೆಂಡತಿಯ ಸಾವಿನ ಬಳಿಕ ತನ್ನ ನಾಲ್ಕು ಮಕ್ಕಳನ್ನು ತಾನೇ ನೋಡಿಕೊಳ್ಳಲು ಆರಂಭಿಸಿದನು. ಹೆಂಡತಿಯ ಸಾವಿನ ಬಳಿಕ ಮನೆಯವರ ಸಂಪರ್ಕ ಕಳೆದುಕೊಂಡಿದ್ದನು. ಜೊತೆಗೆ ತನ್ನ ಮಕ್ಕಳ ಹೆಚ್ಚು ಗಮನ ಹರಿಸಲು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದನು ಎಂದು ಮೂಲಗಳು ತಿಳಿಸಿವೆ.


Spread the love

LEAVE A REPLY

Please enter your comment!
Please enter your name here