ಮಹಾರಾಷ್ಟ್ರ:- ನಾಲ್ಕು ತಿಂಗಳ ಮಗನನ್ನು ನೀರಿನ ಡ್ರಮ್ನಲ್ಲಿ ಮುಳುಗಿಸಿ ಕೊಂದ ತಂದೆಯೋರ್ವ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಜಿಯೋರೈ ತಾಲ್ಲೂಕಿನ ತಲ್ವಾಡಾ ಗ್ರಾಮದಲ್ಲಿ ಜರುಗಿದೆ.
ತಂದೆ ಅಮೋಲ್ ಸೋನಾವಾನೆ ತನ್ನ ಮಗನನ್ನು ಅರ್ಧ ನೀರು ತುಂಬಿದ ಡ್ರಮ್‌ಗೆ ಎಸೆದು ಕೊಂದಿದ್ದಾನೆ. ಕೆಲವು ದಿನಗಳ ಹಿಂದೆ, ಅಮೋಲ್ ಮತ್ತು ಆತನ ಪತ್ನಿ ಕೌಟುಂಬಿಕ ಕಲಹದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಇದೀಗ ಆದರೆ ಸರಿಯಾದ ಸಮಯಕ್ಕೆ ಅವರನ್ನು ರಕ್ಷಿಸಲಾಗಿತ್ತು.ದಂಪತಿಯನ್ನು ಗುರುವಾರ ಸ್ಥಳೀಯ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ದುರಾದೃಷ್ಟವಶಾತ್ ಅಮೋಲ್ ಮತ್ತೆ ದುಡುಕು ನಿರ್ಧಾರ ಕೈಗೊಂಡು ಬಾರದ ಲೋಕಕ್ಕೆ ತೆರಳಿದ್ದಾರೆ. ಇದೀಗ ತಂದೆ ಹಾಗೂ ಮಗನ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಲ್ವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.



