ಕೊಪ್ಪಳ:- ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ಕೊಟ್ಟ ಆರೋಪದಡಿ ಪಾಪಿ ತಂದೆ ಸೇರಿ ಇಬ್ಬರ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ.
Advertisement
ವಿಕೃತ ತಂದೆಯೊಬ್ಬ ತನ್ನ ಸ್ನೇಹಿತನ ಮನೆಗೆ ಅಪ್ರಾಪ್ತ ಮಗಳನ್ನು ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡಿರುವುದು ಕೊಪ್ಪಳದಲ್ಲಿ ನಡೆದಿದೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ತಂದೆ ಹಾಗೂ ಆತನ ಸ್ನೇಹಿತನ ವಿರುದ್ಧ ಬಾಲಕಿ ದೂರು ನೀಡಿದ್ದಾಳೆ. ದೂರಿನಲ್ಲಿ ತಂದೆ ತನ್ನ ಸ್ನೇಹಿತನ ಮನೆಗೆ ಕರೆದು ಕೊಂಡು ಹೋಗಿದ್ದ. ಈ ವೇಳೆ ಅತ್ಯಾಚಾರಕ್ಕೆ ಯತ್ನ ನಡೆದಿದೆ. ಇದರಿಂದ ಗಾಬರಿಗೊಂಡು ಬಾಲಕಿ ಓಡಿ ಅಲ್ಲಿಂದ ತಪ್ಪಿಸಿಕೊಂಡು ನಗರ ಠಾಣೆಗೆ ಬಂದು ದೂರು ನೀಡಿದ್ದಾಗಿ ತಿಳಿಸಿದ್ದಾಳೆ.
ಬಾಲಕಿ ನೀಡಿದ ದೂರಿನಡಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು, ಪೊಲೀಸರಿಂದ ಶೋಧ ನಡೆದಿದೆ.


