ವಿಜಯಸಾಕ್ಷಿ ಸುದ್ದಿ, ಗದಗ: ಇಂದು ಮಹಿಳೆಯರು ಶಿಕ್ಷಣವಂತರಾಗುತ್ತಿರುವುದಕ್ಕೆ ಸಾವಿತ್ರಿಬಾ ಫುಲೆ ಮತ್ತು ಫಾತೀಮಾ ಶೇಖ ನಡೆಸಿದ ಶಿಕ್ಷಣ ಕ್ರಾಂತಿ ಕಾರಣ. ಅಕ್ಷರ ವಂಚಿತ ಸಮುದಾಯಗಳಿಗೆ 19ನೇ ಶತಮಾನದಲ್ಲಿ ಅಕ್ಷರದ ಬೆಳಕಿಗಾಗಿ ಹೋರಾಡಿದ ದಿಟ್ಟ ಮಹಿಳೆ ಫಾತೀಮಾ ಶೇಖ ಎಂಬುದನ್ನು ಯಾರೂ ಮರೆಯಬಾರದೆಂದು ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ ಹೇಳಿದರು.
ಅವರು ಗದಗ ಜಿಲ್ಲಾ ಸ್ಲಂ ಸಮಿತಿ ಹಾಗೂ ಮಹಿಳಾ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ದೇಶದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತೀಮಾ ಶೇಖ ಅವರ 194ನೇ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಫಾತೀಮಾ ಶೇಖ ಅವರು ಸಾವಿತ್ರಿಬಾ ಪುಲೆ ಮತ್ತು ಜ್ಯೋತಿಬಾ ಫುಲೆ ಅವರೊಂದಿಗೆ ಸೇರಿ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಐತಿಹಾಸಿಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದರು. ಸಾವಿತ್ರಿಬಾ ಫುಲೆ ಮತ್ತು ಫಾತೀಮಾ ಶೇಖ ಅವರು ಕೂಡಿ ಬಾಳಿದ, ಕಟ್ಟಿದ ಸೌಹಾರ್ದದ ಬದುಕುಗಳು ಇಂದು ನಮಗೆ ಆದರ್ಶವಾಗಿದೆ ಎಂದು ತಿಳಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿದರು. ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಮಂಜುನಾಥ ಶ್ರೀಗಿರಿ, ಮೆಹರುನಿಸಾ ಡಂಬಳ, ದುರ್ಗಪ್ಪ ಮಣ್ಣವಡರ, ಖಾಜಾಸಾಬ ಇಸ್ಮಾಯಿಲನವರ, ಮೈಮುನ ಬೈರಕದಾರ, ಶಂಕ್ರಪ್ಪ ಪೂಜಾರ, ಜಂದಿಸಾಬ ಬಳ್ಳಾರಿ, ಮಕ್ತುಮಸಾಬ ಮುಲ್ಲಾನವರ, ಸಾಕ್ರುಬಾಯಿ ಗೋಸಾವಿ ಮುಂತಾದವರಿದ್ದರು.