‘ಸಿತಾರೆ ಜಮೀನ್ ಪರ್’ ಸಿನಿಮಾಗೆ ಬಾಯ್ಕಾಟ್‌ ಭಯ: ತ್ರಿವರ್ಣ ಧ್ವಜದ ಡಿಪಿ ಹಾಕಿದ ನಟ ಆಮೀರ್ ಖಾನ್

0
Spread the love

ಮಿಸ್ಟರ್‌ ಫರ್ಫೆಕ್ಷನಿಸ್ಟ್‌ ಆಮೀರ್‌ ಖಾನ್‌ ನಟನೆಯ ‘ಸಿತಾರೆ ಜಮೀನ್ ಪರ್’ ಸಿನಿಮಾ  ಜೂ.20ರಂದು ರಿಲೀಸ್‌ ಆಗಲಿದೆ. ಈ ಬೆನ್ನಲ್ಲೇ ಸಿನಿಮಾವನ್ನು ಬಾಯ್ಕಾಟ್‌ ಮಾಡಬೇಕು ಎಂಬ ಒತ್ತಾಯ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬರ್ತಿದೆ. ಹೀಗಾಗಿ ಆಮೀರ್‌ ಖಾನ್‌ ಬಾಯ್ಕಾಟ್‌ನಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ ಮಾಡಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಎಕ್ಸ್‌ ಖಾತೆಯ ಡಿಪಿಗೆ ತ್ರಿವರ್ಣ ಧ್ವಜ ಹಾಕುವ ಮೂಲಕ ದೇಶ ಭಕ್ತಿ ಸಾರಿದ್ದಾರೆ.

Advertisement

ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ವಿಗ್ನತೆ ಸಮಯದಲ್ಲಿ, ಪಾಕ್‌ಗೆ ಟರ್ಕಿ ಬೆಂಬಲ ನೀಡಿತ್ತು. ಇದೇ ವೇಳೆ, 2020ರಲ್ಲಿ ಆಮೀರ್ ಖಾನ್ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ದಂಪತಿಯನ್ನು ಭೇಟಿ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ರೀತಿ ಟರ್ಕಿ ನಂಟು ಹೊಂದಿರುವ ಆಮಿರ್ ಖಾನ್ ಸಿನಿಮಾವನ್ನು ಬಹಿಷ್ಕರಿಸಬೇಕು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.

ಸುಮಾರು ಮೂರು ವರ್ಷಗಳ ಬಳಿಕ ಆಮೀರ್‌ ಖಾನ್‌ ನಟನೆಯ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಹಿಂದೆ ಬ್ಯಾಕ್‌ ಟು ಬ್ಯಾಕ್‌ ಸೋಲುಗಳನ್ನು ಅನುಭವಿಸಿದ್ದು ಆಮೀರ್‌ ಗೆ ಈ ಸಿನಿಮಾದ ಗೆಲುವಿನ ಅವಶ್ಯಕತೆ ಹೆಚ್ಚಾಗಿಯೇ ಇದೆ. ಹೀಗಾಗಿಯೇ ಸಿತಾರೆ ಜಮೀನ್ ಪರ್’ ಬಾಯ್‌ಕಾಟ್ ಎಂದು ಎಕ್ಸ್ ಖಾತೆಯಲ್ಲಿ ಟ್ರೆಂಡಿಂಗ್ ಆಗ್ತಿರೋದು ಚಿತ್ರತಂಡಕ್ಕೆ ತಲೆನೋವಾಗಿದೆ.


Spread the love

LEAVE A REPLY

Please enter your comment!
Please enter your name here