ಉಗ್ರರ ದಾಳಿ ಭೀತಿ: ಜನನಿಬಿಡ ಪ್ರದೇಶ ಸೇರಿದಂತೆ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ – ಸಿಎಂ ಸಿದ್ದರಾಮಯ್ಯ

0
Spread the love

ಮಂಡ್ಯ: ಕರಾವಳಿ ಪ್ರದೇಶ, ಜನನಿಬಿಡ ಪ್ರದೇಶ ಸೇರಿದಂತೆ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಹೀಗಾಗಿ ಹೆಚ್ಚಿನ ನಿಗಾ ವಹಿಸಲು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಡ್ಯದಲ್ಲಿ ಮಾತನಾಡಿದ ಅವರು, ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ, ಕರ್ನಾಟಕ ಕೂಡ ಅಲರ್ಟ್ ಆಗಿದ್ದು,

Advertisement

ರಾಜ್ಯದ ಪ್ರಮುಖ ಜಲಾಶಯಗಳಿಗೆ ಹೆಚ್ಚಿನ ಭದ್ರತೆ ಹೆಚ್ಚಿಸಲಾಗಿದೆ. ನಮ್ಮ ದೇಶದ ಸೈನಿಕರ ಕ್ಷೇಮಕ್ಕಾಗಿ ಮತ್ತು ಮುಂದೆ ನಡೆಯುವ ಯುದ್ದದಲ್ಲಿ ಭಾರತೀಯ ಸೈನಿಕರಿಗೆ ಗೆಲುವು ಸಿಗಲಿ, ಯಾವುದೇ ಪ್ರಾಣಾಪಾಯಗಳು ಆಗದಿರಲಿ ಎಂದು ಸರ್ಕಾರದಿಂದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿ ಆದೇಶ ಮಾಡಲಾಗಿದೆ ಎಂದು ಹೇಳಿದರು.

ಪಾಕಿಸ್ತಾನದ ಪ್ರಜೆಗಳನ್ನು ಆಯಾ ರಾಜ್ಯ ಸರ್ಕಾರಗಳು 48 ಗಂಟೆಯೊಳಗೆ ದೇಶದಿಂದ ಗಡಿಪಾರು ಮಾಡಬೇಕೆಂಬ ಆದೇಶವಿದ್ದರೂ ಸಹ ರಾಜ್ಯದಲ್ಲಿ ಇನ್ನು ಹಲವರು ವಾಸವಾಗಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು,

ಮೈಸೂರಿನಲ್ಲಿರುವ ಕೆಲ ಪಾಕಿಸ್ತಾನಿ ಪ್ರಜೆಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ ಹೀಗಾಗಿ ಅವರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ, ನ್ಯಾಯಾಲಯದ ಆದೇಶದ ಬಳಿಕ ಗಡಿಪಾರು ಮಾಡಲಾಗುವುದು ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here