ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸುಮಾರು ಐದಾರು ಶತಮಾನಗಳ ಹಿಂದೆಯೇ ವೇದವ್ಯಾಸರು ಸ್ಥಾಪಿಸಿರಬಹುದೆಂಬ ಪ್ರತೀತಿಯನ್ನು ಹೊಂದಿರುವ ಪಟ್ಟಣದ ವಿದ್ಯಾರಣ್ಯ ವೃತ್ತದ ಬಳಿ ಇರುವ ಪುರಾತನ ಮಾರುತಿ ದೇವಸ್ಥಾನವು ಎರಡು ವರ್ಷಗಳ ಹಿಂದೆ ಸುಮಾರು 40 ಲಕ್ಷ ರೂಗಳ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿದ್ದು, ಇದೀಗ ಫೆ. 16ರಂದು ದೇವಸ್ಥಾನದ ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಲಿವೆ.
Advertisement
ಅಂದು ಮುಂಜಾನೆಯಿಂದ ದೇವಸ್ಥಾನದಲ್ಲಿ ಮಾರುತಿ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ-ಪುನಸ್ಕಾರ, ಹೋಮ-ಹವನಾದಿಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ. ನಂತರ ಮಹಾಪ್ರಸಾದ ನೆರವೇರಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್ ಕಮಿಟಿಯವರು ಮನವಿ ಮಾಡಿದ್ದಾರೆ.