ಮಕ್ಕಳಿಗೆ ಆಹಾರ ನೀಡಲು ಬೆಳ್ಳಿಯ ಪಾತ್ರೆಗಳ ಬಳಕೆಯ ಬಗ್ಗೆ ನಾವು ಅನೇಕ ಬಾರಿ ಕೇಳಿರುತ್ತೇವೆ. ವಾಸ್ತವವಾಗಿ, ಕೆಲವು ಸಂಸ್ಕೃತಿಗಳಲ್ಲಿ ಮಗುವಿಗೆ ಬೆಳ್ಳಿಯ ಚಮಚವನ್ನು ಬಳಸಿಯೇ ಮೊದಲ ಬಾರಿ ಊಟವನ್ನು ನೀಡಲಾಗುತ್ತದೆ.
ಮಗುವಿಗೆ 3 ವರ್ಷವಾಗುವವರೆಗೂ ಬೆಳ್ಳಿ ಬಟ್ಟಲಿನಲ್ಲಿಯೇ ಊಟ ಮಾಡಿಸುತ್ತಾರೆ. ಮಾವ ಬೆಳ್ಳಿ ಬಟ್ಟಲು ಕೊಡುವುದು, ಅದೇ ಬಟ್ಟಲಿನಲ್ಲಿ ಮಗುವಿಗೆ ಊಟ ಮಾಡಿಸುವುದು ಕೇವಲ ಸಂಪ್ರದಾಯವಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅದೇನು ಗೊತ್ತಾ? ಇಲ್ಲಿದೆ ನೋಡಿ ಅದರ ಕುರಿತು ಸಂಪೂರ್ಣ ಮಾಹಿತಿ.
ಬೆಳ್ಳಿಯಲ್ಲಿ ಬ್ಯಾಕ್ಟೀರಿಯಾ ನಾಶಪಡಿಸುವ ಗುಣವಿದೆ. ಬೇರೆ ಪಾತ್ರೆಗಳಿಗೆ ಅಂಟಿಕೊಳ್ಳುವಷ್ಟು ಸುಲಭವಾಗಿ ಬೆಳ್ಳಿ ಪಾತ್ರೆಗೆ ಬ್ಯಾಕ್ಟೀರಿಯಾ ಅಂಟಿಕೊಳ್ಳುವುದಿಲ್ಲ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕಾಯಿಲೆಯ ಭೀತಿ ಹೆಚ್ಚಿರುತ್ತದೆ.
ಅದೇ ಬೆಳ್ಳಿ ಬಟ್ಟಲಿನಲ್ಲಿ ಊಟ ಮಾಡಿದರೆ ಬ್ಯಾಕ್ಟೀರಿಯಾ ಸೋಂಕಿನ ಭಯವಿರುವುದಿಲ್ಲ. ಇದೇ ಕಾರಣಕ್ಕಾಗಿಯೇ ಮಕ್ಕಳಿಗೆ ಬೆಳ್ಳಿ ಬಟ್ಟಲಿನಲ್ಲಿ ಊಟ ಮಾಡಿಸುತ್ತಾರೆ.
ಬೆಳ್ಳಿ ಪಾತ್ರೆಯಲ್ಲಿ ಮಗುವಿಗೆ ಆಹಾರವನ್ನು ತಿನ್ನಿಸುವುದು ಚಯಾಪಚಯವನ್ನು ನಿರ್ಮಿಸಲು ಮತ್ತು ಮಗುವಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಬೆಳ್ಳಿ ಪಾತ್ರೆಗಳಲ್ಲಿ ಆಹಾರ ತಿನ್ನಿಸುವುದು ಮಗುವಿಗೆ ಹಲವಾರು ರೋಗಗಳನ್ನು ತಡೆಯುತ್ತದೆ ಎಂದು ಸಾಬೀತಾಗಿದೆ.
ಹಾಗೆಯೇ ಲೋಹದ ಸ್ವಭಾವದ ದೃಷ್ಟಿಯಿಂದ ಬೆಳ್ಳಿ ತಂಪಾಗಿದ್ದರೂ, ಇದು ಕಾಲೋಚಿತ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಸಾಕಷ್ಟು ಖನಿಜಗಳನ್ನು ಹೊಂದಿದೆ. ವಾಸ್ತವವಾಗಿ, ಬೆಳ್ಳಿ ಲೋಟದಲ್ಲಿ ಮಕ್ಕಳಿಗೆ ನೀರು ಕುಡಿಸುವುದರಿಂದ ಮಕ್ಕಳನ್ನು ಕಾಲೋಚಿತ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಇನ್ನು ಬೆಳ್ಳಿಯ ಸಾರಗಳನ್ನು ಹಲವಾರು ಆಯುರ್ವೇದ ಔಷಧಿಗಳಲ್ಲಿ ಸಕ್ರಿಯ ಘಟಕಾಂಶವಾಗಿ ಬಳಸಲಾಗುತ್ತದೆ. ಇದು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ಅದೇ ಸಮಯದಲ್ಲಿ ಇದು ಬೆಳೆಯುತ್ತಿರುವ ಮಕ್ಕಳಲ್ಲಿ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಮಕ್ಕಳಿಗೆ ಬೆಳ್ಳಿ ಪಾತ್ರೆಗಳಲ್ಲಿ ಆಹಾರ ನೀಡುವುದು ಮಕ್ಕಳನ್ನು ಆರೋಗ್ಯಕರವಾಗಿಡಲು ಉತ್ತಮ ಮಾರ್ಗವಾಗಿದೆ.
ಬೆಳ್ಳಿ ಪಾತ್ರೆಯಲ್ಲಿ ಊಟ ಮಾಡುವ ಅಭ್ಯಾಸ ಇದ್ದವರಿಗೆ ನಾಲಿಗೆಯ ರುಚಿ ಮತ್ತು ಆಹಾರದ ರುಚಿ ಎರಡೂ ಹೆಚ್ಚಾಗುತ್ತದೆ. ಏಕೆಂದರೆ ಬೆಳ್ಳಿ ಪಾತ್ರೆ ಯಾವುದೇ ಆಹಾರ ಪದಾರ್ಥಗಳ ಜೊತೆ ರಿಯಾಕ್ಟ್ ಆಗುವುದಿಲ್ಲ. ಹೀಗಾಗಿ ತಯಾರು ಮಾಡಿದ ಅಡುಗೆ ಅತ್ಯಂತ ರುಚಿಕರವಾಗಿರುತ್ತದೆ. ಅಷ್ಟೇ ಅಲ್ಲದೆ ಬೆಳ್ಳಿ ಪಾತ್ರೆ ಆಹಾರಕ್ಕೆ ನೈಸರ್ಗಿಕ ಸ್ವಾದ ನೀಡುತ್ತದೆ ಎಂದು ಹೇಳುತ್ತಾರೆ.
ಬೆಳ್ಳಿ ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣ ಗಳನ್ನು ಒಳಗೊಂಡಿರುವುದರಿಂದ ಬಾಯಿಯ ಆರೋಗ್ಯ ಉತ್ತಮಗೊಳ್ಳುತ್ತದೆ. ಬಾಯಿ ಹಾಗೂ ಹಲ್ಲಿನ ವಸುಡುಗಳಲ್ಲಿ ಉಂಟಾಗುವ ಸೋಂಕನ್ನು ಇದು ನಿವಾರಣೆ ಮಾಡುತ್ತದೆ ಮತ್ತು ಬಾಯಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತದೆ. ಹಲ್ಲುಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಇದು ನಿವಾರಿಸುತ್ತೆ. ಬೆಳ್ಳಿ ಪಾತ್ರೆಗಳಲ್ಲಿ ಅಡುಗೆ ಮಾಡಿ ಹಾಗೂ ಬೆಳ್ಳಿ ತಟ್ಟೆಯಲ್ಲಿ ಆಹಾರ ಸೇವಿಸಿ ಬಾಯಿಯ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.