ಬೀದರ್: ಮಹಿಳಾ ಪೊಲೀಸ್ ಪೇದೆಯೋರ್ವರು ‘ಲೋ ಬಿಪಿಯಿಂದ ಸಾವನ್ನಪ್ಪಿದ ಘಟನೆ ಬೀದರ್‌ನಲ್ಲಿ ಜರುಗಿದೆ. 28 ವರ್ಷದ ಸರಿತಾ ಸಾವನ್ನಪ್ಪಿದ ಮಹಿಳಾ ಪೇದೆ. ಬೀದರ್‌ನ ಸಬ್ ಅರ್ಬನ್ ಪೊಲೀಸ್ ಠಾಣೆಯ ಪೊಲೀಸ್ ಪೇದೆಯಾಗಿದ್ದ ಸರಿತಾ ಹೆರಿಗೆ ಬಳಿಕ ಲೋ ಬಿಪಿಯಾಗಿ ಸಾವನ್ನಪ್ಪಿದ್ದಾರೆ.
Advertisement
ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಗ್ರಾಮದ ಪೊಲೀಸ್ ಪೇದೆಯಾಗಿದ್ದು, ಹಲವು ವರ್ಷಗಳಿಂದ ಬೀದರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಒಂದು ವಾರದ ಹಿಂದೇ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದ ಸರಿತಾ ಹೆರಿಗೆ ಬಳಿಕ ಒಂದು ವಾರ ನಾರ್ಮಲ್ ಆಗಿಯೇ ಇದ್ದರು. ಆದರೆ ಬುಧವಾರ ತಡರಾತ್ರಿ ಏಕಾಏಕಿ ಲೋ ಬಿಪಿಯಾಗಿ ಮಹಿಳಾ ಪೊಲೀಸ್ ಪೇದೆ ಸಾವನ್ನಪ್ಪಿದ್ದು, ಠಾಣೆಯ ಪೊಲೀಸ್ ಸಿಬ್ಬಂದಿ ಭಾವುಕಾಗಿದ್ದಾರೆ.