ಹಿರಿಯೂರು :- ಇಕೊ ಕಾರು-ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ ಘಟನೆ ಹಿರಿಯೂರು-ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಜರುಗಿದೆ.
Advertisement
ಓವರ್ ಟೇಕ್ ಮಾಡಲು ಹೋಗಿ ಈಚರ್ ವಾಹನಕ್ಕೆ ಇಕೋ ಕಾರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಹಿರಿಯೂರಿನ ಸಿದ್ಧನಾಯಕ ಸರ್ಕಲ್ ನಿವಾಸಿ ಸಿದ್ಧರಾಜು(35) ಮೃತ ದುರ್ದೈವಿ. ಮೃತ ಸಿದ್ಧರಾಜು, ಖಾಸಗಿ ಶುದ್ಧ ಕುಡಿಯುವ ನೀರಿನ ವ್ಯಾಪಾರಿಯಾಗಿದ್ದ. ಇದೀಗ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಿರಿಯೂರು ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.