ಮಂಗಳೂರು:- ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರು-ಕೇರಳ ಗಡಿಯ ಕಾಸರಗೋಡಿನ ಉಪ್ಪಳದಲ್ಲಿ ಜರುಗಿದೆ.
ಉಪ್ಪಳ ಬ್ರಿಡ್ಜ್ ಬಳಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಅಲ್ಲದೇ ಓರ್ವ ಗಂಭೀರ ಗಾಯಗೊಂಡಿದ್ದಾರೆ. ಕಾಸರಗೋಡು ಪೈವಳಿಕೆ ಬಾಯಿಕಟ್ಚೆಯ ನಿವಾಸಿ ಜನಾರ್ದನ, ವರುಣ್, ಕೃಷ್ಣ ಸಾವನ್ನಪ್ಪಿದವರು.
ಕಾಸರಗೋಡು ತಲಪಾಡಿ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಗಾಗಿ ಅಲ್ಲಲ್ಲಿ ತಾತ್ಕಾಲಿಕ ತಡೆಗೋಡೆ ಹಾಗೂ ಡಿವೈಡರ್ ನಿರ್ಮಾಣ ಮಾಡಲಾಗಿತ್ತು. ಡಿವೈಡರ್ ಗೊತ್ತಾಗದೆ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.



