ಲಾಯರ್ ಜಗದೀಶ್-ಯುವಕರ ನಡುವೆ ಮಾರಾಮಾರಿ: ದೂರು-ಪ್ರತಿದೂರು ದಾಖಲು!

0
Spread the love

ಬೆಂಗಳೂರು:- ಅಣ್ಣಮ್ಮ ದೇವಿ ಕೂರಿಸುವ ವಿಚಾರಕ್ಕೆ ಲಾಯರ್ ಜಗದೀಶ್ ಮತ್ತು ಯುವಕರ ಗುಂಪಿನ ನಡುವೆ ಕಿರಿಕ್ ನಡೆದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.

Advertisement

ರಾಜಧಾನಿ ಬೆಂಗಳೂರಿನ ಸಹಕಾರ ನಗರದಲ್ಲಿ ಇಂದು ಬೆಳಿಗ್ಗೆ ಈ ಘಟನೆ ಜರುಗಿದೆ. ಮೊದಲಿಗೆ ಅಣ್ಣಮ್ಮ ಕೂರಿಸಲು ವಕೀಲ ಜಗದೀಶ್ ವಿರೋಧ ಮಾಡಿದ್ದರು. ಈ ವೇಳೆ ಯುವಕರ ಗುಂಪು, ಲಾಯರ್ ಜಗದೀಶ್ ಮನೆ ಬಳಿ ಬಂದು ಜಗಳ ಮಾಡಿದೆ. ಈ ವೇಳೆ ಇಬ್ಬರ ನಡುವೆ ಮಾರಾಮಾರಿ ನಡೆದು ಒಬ್ಬರಿಗೊಬ್ಬರು ಕೊರಳಪಟ್ಟಿ ಹಿಡಿದು ಬಡಿದುಕೊಂಡಿದ್ದಾರೆ.

ಘಟನೆ ಸಂಬಂಧ ಕೊಡಿಗೆಹಳ್ಳಿ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here