‘ಬಿಗ್ ಬಾಸ್’ ಮನೆಯ ಆಟ 100 ದಿನಗಳನ್ನು ಪೂರೈಸಿದೆ. ಇನ್ನೂ 3 ವಾರಗಳ ದೊಡ್ಮನೆ ಆಟ ಇರಲಿದೆ. 9 ಸ್ಪರ್ಧಿಗಳು ದೊಡ್ಮನೆಯಲ್ಲಿ ಉಳಿದುಕೊಂಡಿದ್ದು, ಅಳಿವು ಉಳಿವಿಗಾಗಿ ಜಟಾಪಟಿ ಶುರುವಾಗಿದೆ. ಇನ್ನೂ ಇಂದು ನಡೆದ ಟಾಸ್ಕ್‌ವೊಂದರಲ್ಲಿ ತ್ರಿವಿಕ್ರಮ್ ಮತ್ತು ಉಗ್ರಂ ಮಂಜು ಹೊಡೆದಾಡಿಕೊಂಡಿದ್ದಾರೆ. ಉಳಿದುಕೊಂಡಿರುವ 9 ಸ್ಪರ್ಧಿಗಳಿಗೆ ಬಿಗ್ ಬಾಸ್ ಸರಣಿ ಟಾಸ್ಕ್‌ಗಳನ್ನು ನೀಡಲಿದ್ದಾರೆ.
ಈ ಟಾಸ್ಕ್‌ಗಳಲ್ಲಿ ಹೆಚ್ಚು ಚೆನ್ನಾಗಿ ಆಡಿ, ಯಾವುದೇ ಮೋಸ ಮಾಡದೇ ಗೆಲುವು ಸಾಧಿಸಬೇಕು. ಟಾಸ್ಕ್‌ಗಳಲ್ಲಿ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸಿ ಗೆಲುವನ್ನು ಪಡೆಯುವ ಸ್ಪರ್ಧಿಗಳಿಗೆ ಗ್ರ‍್ಯಾಂಡ್ ಫಿನಾಲೆ ಟಿಕೆಟ್ ಸಿಗಲಿದೆ. ಅಂದರೆ ಸ್ಪರ್ಧಿಗಳು ಆಡುವ ಟಾಸ್ಕ್ ಮೇಲೆ ಅವರ ಫಿನಾಲೆ ಟಿಕೆಟ್ ಖಾತರಿಯಾಗುತ್ತದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.
ರಜತ್ ಈ ವಾರ ಮನೆಯ ಕ್ಯಾಪ್ಟನ್ ಆದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್‌ಗಳು ವೇಗ ಪಡೆದುಕೊಂಡಿವೆ. ಫಿನಾಲೆಗೆ ಹೋಗುವ ಆಸೆಯಿಂದ ಎಲ್ಲರೂ ಟಾಸ್ಕ್ ಪೂರ್ಣಗೊಳಿಸುವ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇಷ್ಟು ದಿನ ಆಡಿದ್ದಕ್ಕಿಂತ ಈ ಕೊನೆ ಮೂರು ವಾರಗಳಲ್ಲಿ 9 ಸ್ಪರ್ಧಿಗಳು ಆಡುವ ಟಾಸ್ಕ್ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುತ್ತವೆ.
ಇನ್ನು ಇಂದಿನ ಟಾಸ್ಕ್‌ನಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಮಧ್ಯೆ ಸಖತ್ ವಾಕ್ಸಮರ ನಡೆದಿದೆ. ಟಾಸ್ಕ್‌ನಲ್ಲಿ ತ್ರಿವಿಕ್ರಮ್ ಮುಖಕ್ಕೆ ಉಗ್ರಂ ಮಂಜು ಹೊಡೆದಿದ್ದಾರೆ. ಇದಕ್ಕೆ ಕೋಪಗೊಂಡಿರುವ ತ್ರಿವಿಕ್ರಮ್ ಅಷ್ಟು ಜೋರಾಗಿ ಹೊಡೆದರೆ ಹೆಂಗೆ ಎಂದು ಪ್ರಶ್ನೆ ಮಾಡಿದ್ದಲ್ಲದೇ ನಾನು ಹೊಡೆಯುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮಂಜು ನಾನು ಎಲ್ಲಿ ತಳ್ಳಾಡಿದೆ, ಎಲ್ಲಿ ಹೊಡೆದಾಡಿದೆ ಎಂದು ಕೇಳಿದ್ದಾರೆ. ಬಳಿಕ ಟಾಸ್ಕ್‌ನಲ್ಲಿ ಮಂಜುಗೆ ತ್ರಿವಿಕ್ರಮ್ ಓಡಾಡಿಸಿ ಹೊಡೆದಿದ್ದಾರೆ.