ಕುಡಿದ ಮತ್ತಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ: ದಾಖಲಾಗದ ದೂರು!

0
Spread the love

ಚಿಕ್ಕಮಗಳೂರು : ಕುಡಿದ ಮತ್ತಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗ ಜರುಗಿದೆ.

Advertisement

2025 ರ ಹೊಸ ವರ್ಷದ ಪ್ರಯುಕ್ತ ಕಳೆದ ರಾತ್ರಿ ಆಯೋಜನೆ ಮಾಡಿದ್ದ ಪಾರ್ಟಿ ಬಳಿಕ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದೆ. ಪಾನಮತ್ತರಾಗಿದ್ದ ಯುವಕರು, ನಿಲ್ಲೋಕು ಶಕ್ತಿ ಇಲ್ಲದೆ ಇದ್ರೂ ಬೈಕ್ ಬೀಳಿಸಿಕೊಂಡು, ಎದ್ದು-ಬಿದ್ದು  ಒಬ್ಬರನೊಬ್ಬರು ಹೊಡೆದಾಡಿಕೊಂಡಿದ್ದಾರೆ.

ಸ್ವಲ್ಪ ಸಮಯದ ನಂತರ ಅವರವರೇ ಬಿಡಿಸಿಕೊಂಡು ವಾಪಸ್ ಹೋಗಿದ್ದಾರೆ. ಇನ್ನೂ ಘಟನೆ ಸಂಬಂಧ 2 ಗುಂಪಿನ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ. ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here