ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಗದಗ ಜಿಲ್ಲಾ ಘಟಕ ವತಿಯಿಂದ ಬೆಳಗಾವಿ ಅಧಿವೇಶನದಲ್ಲಿ ಹಳೆ ಪಿಂಚಣಿ ಜಾರಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದ ಎದುರು ನಡೆಯಲಿರುವ ಪ್ರತಿಭಟನೆಗೆ ನಗರದ ಮುಳಗುಂದ ನಾಕಾದಿಂದ ಗದಗ ಜಿಲ್ಲೆಯ ಎಲ್ಲ ತಾಲೂಕಗಳ ನೌಕರರು ಬೆಳಗಾವಿಗೆ ತೆರಳಿದರು.
ಈ ಸಂದರ್ಭದಲ್ಲಿ ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ಶಿಕ್ಷಕರ ಬೇಡಿಕೆಗಳಿಗೆ ವಿವಿಧ ಸಂಘಟನೆಗಳು ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ. ಪಿಂಚಣಿ ವಂಚಿತರ ಬೆಳಗಾವಿ ಚಲೋ ಕಾರ್ಯಕ್ರಮದ ಮೂಲಕ ಶಿಕ್ಷಕರ ಜ್ವಲಂತ ಸಮಸ್ಯೆಗಳು ಈಡೇರುವಂತೆ ಸಂಘಟಿತವಾಗಿ ಹೋರಾಟ ಮಾಡಿ ಎಂದು ಕರೆ ನೀಡಿದರು.
ರಾಜ್ಯಾಧ್ಯಕ್ಷ ಜಿ ಹನುಮಂತಪ್ಪ, ರಾಜ್ಯ ಉಪಾಧ್ಯಕ್ಷ ಈರಣ್ಣ ಹಾದಿಮನಿ, ಜಿಲ್ಲಾಧ್ಯಕ್ಷ ಬಸವರಾಜ ಕೊರ್ಲಹಳ್ಳಿ, ಗೌರವಾಧ್ಯಕ್ಷ ವಿ.ಕೆ. ಕೊಳ್ಳಿ, ಪ್ರಮುಖರಾದ ಎಂ.ಕೆ. ಲಮಾಣಿ, ರವಿ ಕೋಟಿಯವರ, ವಿ.ಎಂ. ಕುಂದ್ರಳ್ಳಿ, ಎಸ್.ಎಸ್. ಚಿಕ್ಕೊಪ್ಪ, ರೇಣುಕಾಮಠ, ಎಚ್.ಪಿ. ಹಡಪದ, ಎಸ್.ಎಸ್. ಚಿಕ್ಕಮಠ, ಬಿ.ಎ. ಹೂಗಾರ, ಉಮೇಶ ಹಿರೇಮಠ, ಸತೀಶ ಪಾಸಿ, ಎಸ್.ವ್ಹಿ. ಡಾಣಾತ್ಗರ, ಬಿ.ಐ. ಗಿಂಡಿಮಠ, ಎಂ.ಸಿ. ಗುಳೇದ, ಝಡ್ ಎಂ.ಖಾಜಿ, ಎಸ್.ಎಂ. ಅಂಗಡಿ, ಧನಷು ನಾಯ್ಕ, ಬಿ.ಎಸ್. ಬಸನಗೌಡ, ಸಿ.ವಾಯ್. ಚನ್ನಪ್ಪಗೌಡ್ರ, ಆರ್. ನಾಗರಾಜ, ಡಾ. ರಾಜಶೇಖರ ಕನಕರಡ್ಡಿ, ಎಸ್.ಕೆ. ವಂಡಕರ, ಬಿ.ಕೆ. ಕಟ್ಟಿಮನಿ ಸೇರಿದಂತೆ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದರು.