ಬೆಂಗಳೂರು:– ನಗರದ ಪಬ್ನಲ್ಲಿ ಕನ್ನಡ ಹಾಡುಗಳಿಗಾಗಿ ಫೈಟ್ ನಡೆದ ಘಟನೆ ಜರುಗಿದೆ. ದಕ್ಷಿಣ ಭಾರತದ ಹಾಡುಗಳನ್ನು ಹಾಕಲು ಹಿಂದೇಟು ಹಾಕಿದ್ದಕ್ಕೆ ಪಬ್ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.
Advertisement
ಕೋರಮಂಗಲದ ಪಬ್ವೊಂದರಲ್ಲಿ ಬರೀ ಇಂಗ್ಲೀಷ್ ಹಾಡುಗಳನ್ನು ಹಾಕಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ ಗ್ರಾಹಕರು, ದಕ್ಷಿಣ ಭಾರತದ ಹಾಡುಗಳನ್ನು ಹಾಕುವಂತೆ ಹೇಳಿದ್ದಾರೆ.
ಇದಕ್ಕೆ ಪಬ್ ಸಿಬ್ಬಂದಿ ನಾವು ಬರೀ ಇಂಗ್ಲೀಷ್ ಹಾಡುಗಳನ್ನ ಮಾತ್ರ ಹಾಕುತ್ತೇವೆ ಅಂತ ಹೇಳಿದ್ದಾರೆ. ಇದರಿಂದ ಪಬ್ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಕೆಲ ಕಾಲ ವಾಗ್ವಾದ ನಡೆಯಿರತು. ಕೊನೆಗೆ ಪಬ್ ಸಿಬಂದಿ ಕನ್ನಡ ಹಾಡು ಮಾತ್ರ ಹಾಕುತ್ತೇವೆ, ಆದರೆ ತೆಲುಗು, ತಮಿಳು ಹಾಡುಗಳನ್ನು ಹಾಕುವುದಿಲ್ಲ ಎಂದಿದ್ದಾರೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹರಿಬಿಡಲಾಗಿದೆ.