ಕೋಲಾರ:-ಮದುವೆಯಾದ ಕೆಲವೇ ಗಂಟೆಯಲ್ಲಿ ಜಗಳವಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ ವಧು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ಜರುಗಿದೆ.
ಲಿಖಿತ ಶ್ರೀ ಹಾಗೂ ನವೀನ್ ಇಂದು ಸಪ್ತಪದಿ ತುಳಿದಿದ್ದಾರೆ. ಆದ್ರೆ, ಅದೇನಾಯ್ತೋ ಏನೋ ರೂಮ್ಗೆ ಹೋಗಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಧು ಲಿಖಿತ ಶ್ರೀ ಸಾವನ್ನಪ್ಪಿದ್ದಾಳೆ.
ಚಂಬರಸನಹಳ್ಳಿ ಗ್ರಾಮದಲ್ಲಿ ಇಂದು ವಧು ಲಿಖಿತ ಶ್ರೀ ಹಾಗೂ ನವೀನ್ ಅದ್ಧೂರಿಯಾಗಿ ಮದುವೆ ಆಗಿದೆ. ಬಳಿಕ ರೂಮ್ಗೆ ತೆರಳಿದ ಜೋಡಿ ಅದೇನಾಯ್ತೋ ಏನೋ ಏಕಾಏಕಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಇಬ್ಬರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದ್ರೆ, ದುರದೃಷ್ಟವಶಾತ್ ವಧು ಲಿಖಿತ ಶ್ರೀ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನು ಗಂಭೀತವಾಗಿ ಗಾಯಗೊಂಡಿರುವ ವರ ನವೀನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನಿಸಲಾಗಿದೆ.
ಮದ್ವೆಯಾಗಿ ಇನ್ನೇನು ಸುಖವಾಗಿ ಸಂಸಾರ ಸಾಗಿಸಬೇಕಿದ್ದ ವಧು ದುರಂತ ಅಂತ್ಯಕಂಡಿದ್ದರೆ, ವರ ನವೀನ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ.
ಆದ್ರೆ, ಯಾವ ಕಾರಣಕ್ಕೆ ಜೀವ ಹೋಗುವಾಗೆ ಹೊಡೆದುಕೊಂಡರು ಎನ್ನುವುದು ತಿಳಿದುಬಂದಿಲ್ಲ. ಸದ್ಯ ವಿಷಯ ತಿಳಿದು ಸ್ಥಳಕ್ಕೆ ಅಂಡರ್ ಸನ್ ಪೇಟೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.