ಪ್ರೀತಿಸಿ ಮದ್ವೆಯಾದ ಕೆಲವೇ ಗಂಟೆಯಲ್ಲಿ ಹೊಡೆದಾಟ: ಕೋಲಾರ ಎಸ್ಪಿ ಹೇಳಿದ್ದೇನು..?

0
Spread the love

ಕೋಲಾರ: ನಿನ್ನೆ ಖುಷಿಯಿಂದ ಮದುವೆಯಾಗಿದ್ದ ನವಜೋಡಿ ಕೆಲವೇ ಗಂಟೆಗಳಲ್ಲಿ ಬಡಿದಾಡಿಕೊಂಡು ಪ್ರಾಣಬಿಟ್ಟಿರುವ ಘಟನೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದೆ. ಲಿಖಿತಶ್ರೀ (20) ಹಾಗೂ ನವೀನ್ (29) ಮೃತ ದುರ್ದೈವಿಗಳು. ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ಚಿಕಿತ್ಸೆ ಫಲಿಸದೇ ಲಿಖಿತಶ್ರೀ ಸಾವನ್ನಪ್ಪಿದ್ದರೆ ಇಂದು ನವೀನ್ ಸಾವನ್ನಪ್ಪಿದ್ದಾರೆ.

Advertisement

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಎಸ್ಪಿ ಪ್ರತಿಕ್ರಿಯೇ ನೀಡಿದ್ದು, ಎರಡು ಕಡೆಯವರ ಸಂಬಂಧಿಕರು ಸೇರಿ ವಿವಾಹ ಮಾಡಿದ್ದಾರೆ. ಬಳಿಕ ಸಾಯಂಕಾಲ 5 ಗಂಟೆ ಸುಮಾರಿಗೆ ನೂತನ ಜೋಡಿ, ವರನ ಮನೆಗೆ ಹೋಗಿದ್ದಾರೆ. ನಂತರ ಇಬ್ಬರು ಒಂದು ರೂಂನ ಒಳಗೆ ಹೋಗಿದ್ದು, ಕೆಲಸಮಯದ ಬಳಿಕ ಗಲಾಟೆ ಶಬ್ದ ಕೇಳುತ್ತದೆ. ಕೂಡಲೇ ಎಲ್ಲರೂ ಹೋಗಿ ನೋಡಿದಾಗ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುತ್ತಾರೆ.

ಇಬ್ಬರನ್ನು ಆಟೋದಲ್ಲಿ ಕರೆದುಕೊಂಡು ಬಂದು ಕೆಜಿಎಫ್​ನ ಆಸ್ಪತ್ರೆಯಲ್ಲಿ ಸೇರಿಸುತ್ತಾರೆ. ಆದರೆ, ವಧು ಲಿಖಿತ ಶ್ರೀ ಸಾವನ್ನಪ್ಪಿದ್ದಾರೆ. ಇಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ದುರಾದೃಷ್ಟವಶಾತ್​ ವರ ನವೀನ್ ಕೂಡ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ವಧುವಿನ ತಂದೆ ದೂರು ದಾಖಲಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ರೂಮ್​ಗೆ ಹೋದಾಗ, ಇಬ್ಬರ ನಡುವೆ ಮನಸ್ಥಾಪ ಬಂದು, ವರ ನವೀನ್ ಹರಿತವಾದ ಆಯುಧದಿಂದ ಹೊಡೆದಿರುವುದು ತಿಳಿದು ಬಂದಿದೆ. ಇನ್ನು ಎಲ್ಲರೂ ಬರುವಷ್ಟರಲ್ಲಿ ತನ್ನ ಮೇಲೇ ತಾನೇ ಹಲ್ಲೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.


Spread the love

LEAVE A REPLY

Please enter your comment!
Please enter your name here