ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಇತಿಹಾಸ ಉಪನ್ಯಾಸಕರ ಸಂಘ ಧಾರವಾಡ ಹಾಗೂ ಎಸ್ಎಸ್ಕೆ ಪದವಿಪೂರ್ವ ಕಾಲೇಜು ಹುಬ್ಬಳ್ಳಿ ಇವುಗಳ ಆಶ್ರಯದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಅವಿಭಜಿತ ಧಾರವಾಡ ಜಿಲ್ಲೆಯ ಹೋರಾಟಗಾರರ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೀಲಕಂಠಪ್ಪ ಜಡಿ ಮಾತನಾಡಿ, ಸ್ವಾತಂತ್ರ್ಯ ಅನ್ನುವುದು ಸುಮ್ಮನೆ ಸಿಕ್ಕದು. ಸಾವಿರಾರು ಜನ ರಕ್ತ ಹರಿಸಿದ ಪರಿಣಾಮ ಸ್ವಾತಂತ್ರ್ಯ ನಮಗೆ ದಕ್ಕಿದೆ. ಹಗುರಾಗಿ ಮಾತನಾಡದೆ ಹಗುರಾಗಿ ತಿಳಿಯದೆ ಸ್ವಾತಂತ್ರ್ಯ ಉಳಿಸಿ-ಬೆಳೆಸುವುದು ಯುವಕರ ಕೈಯಲ್ಲಿದೆ ಎಂದರು.
ಉಪನ್ಯಾಸಕಿ ತ್ರಿವೇಣಿ ಚಿಪ್ಪಾಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಜಯದೇವಿತಾಯಿ ಲಿಗಾಡೆ ತಮ್ಮ ಮಕ್ಕಳಿಗಷ್ಟೇ ತಾಯಿ ಆಗದೆ ದೇಶಕ್ಕೆ ತಾಯಿಯಾದ ಕರುಣಾಮಯಿ. ನೊಂದವರ ಬಾಳಿಗೆ ಬೆಳಕಾಗಿ ನಿಂತವರು.
ಲಿಗಾಡೆ ಅವರ ತಂದೆ ವಾರದ ಮಲ್ಲಪ್ಪನವರು ಅವರ ಹಾಗೂ ಕುಟುಂಬ ಸಹನೆಯಿಂದ ಸ್ವಾತಂತ್ರ್ಯದೆಡೆಗೆ ನಡೆದವರು. ಬಡವ-ಬಲ್ಲಿದರಿಗೆ ಆಸರೆ ಆದವರು ಲಿಗಾಡೆ. ತಾಯಿಯ ಭಾವನೆ ನಮ್ಮಲ್ಲರ ಬದುಕಿನಲ್ಲಿ ನಿತ್ಯ ಹಾಸು ಹೊಕ್ಕಾಗಿರಬೇಕೆಂದರು.
ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ಸಿವಾಯ್ಸಿಡಿ ಕಲಾತಂಡ, ಎಸ್.ಎಸ್. ಹಿರೇಮಠ, ಶರೀಫ್ ದೋಡಮನಿ, ಈಶ್ವರ ಅರಳಿ, ನಾಗರಾಜ ಗೌಡಣ್ಣವರ, ಮಲ್ಲೇಶ ಮುಳಗುಂದ ಭಾಗವಹಿಸಿ ದೇಶ ಭಕ್ತಿಗೀತೆಗಳು, ಲಾವಣಿ ಪದಗಳನ್ನು ಹಾಡಿ ವಿದ್ಯಾರ್ಥಿಗಳ ಮನ ಸ್ವಾತಂತ್ರ್ಯ ಸೇನಾನಿಗಳತ್ತ ಸೆಳೆದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ನಾರಾಯಣ ಧರ್ಮದಾಸ್, ಸುರೇಶ್ ಸೋಳಂಕಿ, ಮೋತಿಲಾಲ್ ಮಿಸ್ಕಿನ, ಎಸ್.ಕೆ. ಬದ್ದಿ, ಡಿಗ್ರಿ ಪ್ರಾಚಾರ್ಯರಾದ ಪುಷ್ಪಾ ಧೊಂಗಡಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಜಾತಾ ಘೋರ್ಪಡೆ ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್.ಎಚ್. ಹನುಮಂತಪ್ಪ ಸ್ವಾಗತಿಸಿದರು. ಡಾ. ಶ್ರೀಧರ್ ಕೊಟಗಿ ನಿರೂಪಿಸಿದರು.