ಸಹ ನಟಿಗೆ ಕಿರುಕುಳ: ಖ್ಯಾತ ನಟನ ಮೇಲೆ ನಿಷೇಧ ಹೇರಲು ಮುಂದಾದ ಚಿತ್ರರಂಗ

0
Spread the love

ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೋ ಅವರ ಮೇಲೆ ನಿಷೇಧ ಹೇರುವ ಸಾಧ್ಯತೆ ದಟ್ಟವಾಗಿದೆ. ಮಲಯಾಳಂನ ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ಶೈನ್ ಟಾಮ್ ಚಾಕೊ ಸಿನಿಮಾ ಸೆಟ್​ನಲ್ಲಿ ಸಹ ನಟಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಸೆಟ್‌ ನಲ್ಲಿ ಡ್ರಗ್ಸ್‌ ತೆಗೆದುಕೊಂಡಿರುವ ಆರೋಪವು ಕೇಳಿ ಬಂದಿದ್ದು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ.

Advertisement

ಮಲಯಾಳಂನ ‘ಸೂತ್ರವಾಕ್ಯಂ’ ಹೆಸರಿನ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು ಸಿನಿಮಾದಲ್ಲಿ ಶೈನ್ ಟಾಮ್ ಚಾಕೊ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ವಿನ್ಶಿ ಅಲೋಷಿಯಸ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ನಟಿ ವಿನ್ಶಿ ಅಲೋಷಿಯಸ್, ಕೇರಳ ಫಿಲಂ ಛೇಂಬರ್, ಕೇರಳ ಸಿನಿಮಾ ಕಲಾವಿದರ ಸಂಘ ಮತ್ತು ಇನ್ನೂ ಕೆಲವು ಸಿನಿಮಾ ಸಂಬಂಧಿತ ಸಂಘ-ಸಂಸ್ಥೆಗಳಿಗೆ ಶೈನ್ ಟಾಮ್ ಚಾಕೊ ವಿರುದ್ಧ ದೂರು ನೀಡಿದ್ದಾರೆ. ಸಿನಿಮಾ ಸೆಟ್​ನಲ್ಲಿ ಟಾಮ್ ಚಾಕೊ ತಮ್ಮೊಟ್ಟಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಹಾಗೂ ಸೆಟ್​ನಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆಂದು ನಟಿ ಆರೋಪ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ನಟಿ ವಿನ್ಶಿ ಅಲೋಷಿಯಸ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋನಲ್ಲಿ ಶೈನ್ ಟಾಮ್ ಚಾಕೊ ಹೆಸರು ಹೇಳದೆ ನಟರೊಬ್ಬರು ತಮ್ಮೊಟ್ಟಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದಿದ್ದರು. ನನಗೆ ಮತ್ತು ಸಹನಟಿಗೆ ಆ ನಟ ಕಿರುಕುಳ ನೀಡಿದ್ದಾರೆ. ನನ್ನ ಬಟ್ಟೆ ಸರಿಯಿಲ್ಲದರ ಬಗ್ಗೆ ನಾನು ವಾದ ಮಾಡುತ್ತಿದ್ದಾಗ ನಾನು ಅದನ್ನು ಸರಿ ಮಾಡುತ್ತೇನೆ ಎಂದು ಎಲ್ಲರ ಎದುರು ಕೆಟ್ಟದಾಗಿ ಮಾತನಾಡಿದರು ಎಂದು ಅವರು ಹೇಳಿದ್ದರು. ಅಲ್ಲದೆ, ಅವರು ಸಿನಿಮಾ ಸೆಟ್​ನಲ್ಲಿ ಬಿಳಿ ಬಣ್ಣದ ಪೌಡರ್ ಅನ್ನು ಸೇವಿಸುವುದನ್ನು ನಾನು ನೋಡಿದ್ದೇನೆ ಎಂದು ಸಹ ಹೇಳಿದ್ದರು. ವಿಡಿಯೋನಲ್ಲಿ ಶೈನ್ ಟಾಮ್ ಚಾಕೊ ಅವರ ಹೆಸರನ್ನು ನಟಿ ಹೇಳಿರಲಿಲ್ಲ. ಆದರೆ ಇದೀಗ ನಟಿ ಟಾಮ್ ಚಾಕೊ ವಿರುದ್ಧ ದೂರು ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಟಾಮ್ ಚಾಕೊ ಉಳಿದುಕೊಂಡಿದ್ದ ಹೋಟೆಲ್ ಮೇಲೆ ದಾಳಿ ಮಾಡಿದಾಗ ಟಾಮ್ ಚಾಕೊ ಅಲ್ಲಿಂದ ಪರಾರಿ ಆಗಿದ್ದಾರೆ. ಟಾಮ್ ಚಾಕೊ ಕಿಟಕಿ ಹಾರಿ, ಮೆಟ್ಟಿಲು ಇಳಿದು ಓಡಿ ಹೋಗುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ. ಆ ಮೂಲಕ ಟಾಮ್ ಚಾಕೊ ಡ್ರಗ್ಸ್ ಸೇವನೆ ಆರೋಪ ಬಹುತೇಕ ಖಾತ್ರಿ ಆದಂತಾಗಿದ್ದು, ಇದೀಗ ಕೇರಳ ಚಿತ್ರರಂಗ ಟಾಮ್ ಚಾಕೊ ಅವರ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ.


Spread the love

LEAVE A REPLY

Please enter your comment!
Please enter your name here