ವಿಜಯಸಾಕ್ಷಿ ಸುದ್ದಿ, ಗದಗ : ಕೆ.ಎಲ್.ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕಾರದ ಐ.ಬಿ. ಪಾಟೀಲರು ಇನ್ನರ್‌ವ್ಹೀಲ್ ಸಂಸ್ಥೆಯನ್ನು ಸಂಪರ್ಕಿಸಿ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಶೇ. 97.5 ಅಂಕ ಗಳಿಸಿದ ತಮ್ಮ ವಿದ್ಯಾರ್ಥಿನಿ ಬಸಮ್ಮ ಜಗ್ಗಲ್‌ಗೆ ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ನೀಡುವಂತೆ ಕೋರಿದ್ದರು. ಈ ಕೋರಿಕೆಗೆ ಸ್ಪಂದಿಸಿದ ಇನ್ನರ್‌ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ನಾಗರತ್ನ ಮಾರನಬಸರಿಯವರು ತಮ್ಮ ಪುತ್ರಿ ಗ್ರೀಷ್ಮ ಮಾರನಬಸರಿ (ಕೋಟಿ)ಯವರಿಂದ 5 ಸಾವಿರ ರೂ ಹಣವನ್ನು ವಿದ್ಯಾರ್ಥಿನಿಗೆ ನೀಡಿ ಆಕೆಯ ಭವಿಷ್ಯವನ್ನು ನಿರೂಪಿಸುವಲ್ಲಿ ಸಹಾಯ ಹಸ್ತ ಚಾಚಿದರು.
ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಜಿಲ್ಲೆ-317ರ ಮಾಜಿ ಚೇರಮನ್ ಪ್ರೇಮಾ ಗುಳಗೌಡರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕೆ.ಎಲ್.ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥಿನಿ ಬಸಮ್ಮ ಜಗ್ಗಲ್ ಪರವಾಗಿ ಉಪನ್ಯಾಸಕ ಐ.ಬಿ. ಪಾಟೀಲ ಇನ್ನರ್‌ವ್ಹೀಲ್ ಸಂಸ್ಥೆಯ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ಇನ್ನರ್‌ವ್ಹೀಲ್ ಸಂಸ್ಥೆ ಗದಗ-ಬೆಟಗೇರಿಯ ಕಾರ್ಯದರ್ಶಿ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಐಎಸ್‌ಓ ಪುಷ್ಪಾ ಭಂಡಾರಿ, ಸದಸ್ಯರಾದ ಶ್ರಿಯಾ ಪವಾಡಶೆಟ್ಟರ, ಸುಮಾ ಪಾಟೀಲ, ಮಂಗಳಾ ಅಬ್ಬಿಗೇರಿ, ನಾಗರತ್ನ ಪಾಟೀಲ, ಪೂಜಾ ಭೂಮಾ, ನೀಲಾಂಬಿಕಾ ಉಗಲಾಟ, ಸುಲೋಚನ ಐಹೊಳಿ, ಆಶಾ ಹುಕ್ಕೇರಿ, ರೇಷ್ಮಾ ಬಸರಿಗಿಡದ, ಸಂಧ್ಯಾ ಕೋಟಿ, ಸುಶಿಲಾ ಕೋಟಿ, ಕಸ್ತೂರಬಾಯಿ ಹಿರೇಗೌಡರ ಮುಂತಾದವರು ಉಪಸ್ಥಿತರಿದ್ದರು.