ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಪ್ರತಿಯೊಂದು ಮನೆಗೂ ಸಹ ಕೇಂದ್ರ ಸರಕಾರದ ಒಂದಿಲ್ಲೊಂದು ಯೋಜನೆಯನ್ನು ತಲುಪಿಸಲಾಗುತ್ತಿದೆ. ಇದೀಗ ಬೀದಿ ಬದಿ ವ್ಯಾಪಾರಸ್ಥರಿಗೂ ಸಹ ಆರ್ಥಿಕ ಸೌಲಭ್ಯವನ್ನು ಕಲ್ಪಿಸುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಶಿರಹಟ್ಟಿಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಜೀವನೋಪಾಯ, ಪಟ್ಟಣ ಪಂಚಾಯತ ಶಿರಹಟ್ಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ, ಪಿಎಂ ಸ್ವನಿಧಿ ಕಾರ್ಯಕ್ರಮ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಮಾರಾಟ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 5 ಲಕ್ಷ ರೂ.ವರೆಗೆ ಸಹಾಯಧನ ಪಡೆಯಬಹುದಾಗಿದೆ.
ಹೊಸದಾಗಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕೌಶಲ್ಯಾಧಾರಿತ ಕೆಲಸ ಮಾಡುವ ಕುಟುಂಬಗಳಿಗೂ ಸಹ ಹಂತ ಹಂತವಾಗಿ ಆರ್ಥಿಕ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಜೊತೆಗೆ ಡಿಜಿಟಲ್ ವ್ಯವಹಾರ ಮಾಡಿದ ವ್ಯಾಪಾರಸ್ಥರಿಗೆ ಮಾಸಿಕವಾಗಿಯೂ ಸಹ ಸಹಾಯಧನ ಸಿಗಲಿದೆ. ಆದ್ದರಿಂದ ಹೆಚ್ಚಾಗಿ ಡಿಜಿಟಲ್ ಮೂಲದಲ್ಲಿ ವ್ಯವಹರಿಸಬೇಕೆಂದು ಹೇಳಿದರು.
ತಹಸೀಲ್ದಾರ ಅನಿಲ ಬಡಿಗೇರ, ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಪ.ಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಸದಸ್ಯರಾದ ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಹೊನ್ನಪ್ಪ ಶಿರಹಟ್ಟಿ, ಇಸಾಕ ಆದ್ರಳ್ಳಿ, ಅಲ್ಲಾಭಕ್ಷಿ ನಗಾರಿ, ಶಬ್ಬೀರ ನಗಾರಿ, ಮಾಬುಸಾಬ ಲಕ್ಷ್ಮೇಶ್ವರ, ದೇವಪ್ಪ ಆಡೂರ, ನಂದಾ ಪಲ್ಲೇದ, ಎಂ.ಕೆ.ಲಮಾಣಿ ಮುಂತಾದವರು ಉಪಸ್ಥಿತರಿದ್ದರು.