ಇಸ್ಲಾಮಾಬಾದ್:- ಪಹಲ್ಗಾಮ್ ದಾಳಿ ಬಳಿಕ ಭಾರತ-ಪಾಕಿಸ್ತಾನ ಇವೆರಡೂ ದೇಶಗಳಲ್ಲೂ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ದಾಳಿ-ಪ್ರತಿದಾಳಿ ನಡೆಯುತ್ತಿದೆ.
ಭಾರತ ಆಪರೇಷನ್ ಸಿಂಧೂರ್ ಮುಂದುವರೆದ ಭಾಗವಾಗಿ ಗುರುವಾರ ಮಧ್ಯಾಹ್ನ ಪಾಕಿಸ್ತಾನದ ಏರ್‌ಬೇಸ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. ಇದೀಗ ಪಾಕಿಸ್ತಾನ ಭಾರತದ ಗಡಿಭಾಗಗಳ ಮೇಲೆ ಪಾಕಿಸ್ತಾನ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಲು ಮುಂದಾಗಿತ್ತು. ಇದರಿಂದ ಭಾರತ ಕೂಡ ಪಾಕಿಸ್ತಾನದ ಮೇಲೆ ಪ್ರತಿದಾಳಿ ಆರಂಭಿಸಿದೆ. ಅದೂ ಕೂಡ ಭಾರತದ ಅಂಬಾಲದಿದ ಇಸ್ಲಾಮಾಬಾದ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಈ ದಾಳಿ-ಪ್ರತಿದಾಳಿ ಮಧ್ಯೆಯೇ ಪಾಕಿಸ್ತಾನವು ಭಾರತದ ದಾಳಿಗೆ ಅಕ್ಷರಶಃ ನಲುಗಿದ್ದು, ಸಾಲಕ್ಕಾಗಿ ವರ್ಲ್ಡ್ ಬ್ಯಾಂಕ್ ಮೊರೆ ಹೋಗಿದೆ. ಶತ್ರುಗಳಿಂದ ಭಾರೀ ನಷ್ಟ ಎದುರಾಗಿದೆ ಎಂದು ಅಂತರರಾಷ್ಟ್ರೀಯ ಪಾಲುದಾರರಿಗೆ ಹೆಚ್ಚಿನ ಸಾಲಕ್ಕಾಗಿ ಪಾಕ್ ಮನವಿ ಮಾಡಿದೆ. ಉಲ್ಬಣಗೊಳ್ಳುತ್ತಿರುವ ಯುದ್ಧ ಮತ್ತು ಷೇರು ಕುಸಿತದ ಮಧ್ಯೆ ಪಾಕ್ ನಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ.