ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ 2025ನೇ ಜುಲೈ ತಿಂಗಳಲ್ಲಿ ನಡೆದ ಬೆರಳಚ್ಚು ಮತ್ತು ಕಂಪ್ಯೂಟರ್ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ಶ್ರೀ ಕಲ್ಮೇಶ್ವರ ಬೆರಳಚ್ಚು ಮತ್ತು ಕಂಪ್ಯೂಟರ್ ವಿದ್ಯಾಲಯದ ಫಲಿತಾಂಶವು ಶೇ. 90.5ರಷ್ಟು ಆಗಿದೆ.
ಇಂಗ್ಲೀಷ್ ಬೆರಳಚ್ಚು ಜ್ಯೂನಿಯರ್ ವಿಭಾಗದಲ್ಲಿ ಆದರ್ಶ ಪೂಜಾರ ಶೇ. 92.50, ಅಫಜಲ್ ಬಳ್ಳಾರಿ, ಸಹನಾ ಗದಗ, ತಹರೀನ್ ಮಕಾನದಾರ ಶೇ. 85.50, ಇಂಗ್ಲಿಷ್ ಬೆರಳಚ್ಚು ಪ್ರೌಢ ದರ್ಜೆಯಲ್ಲಿ ನೂರಹಬೀಬಾ ಜಾಡಗೇರಿ ಶೇ. 76.50, ಕನ್ನಡ ಬೆರಳಚ್ಚು ಜ್ಯೂನಿಯರ್ ವಿಭಾಗದಲ್ಲಿ ಆದರ್ಶ ಪೂಜಾರ ಶೇ. 86, ನೂರಹಬೀಬಾ ಜಾಡಗೇರಿ ಶೇ. 84, ಕನ್ನಡ ಬೆರಳಚ್ಚು ಪ್ರೌಢದರ್ಜೆ ವಿಭಾಗದಲ್ಲಿ ಪೂಜಾ ಬೆಳದಡಿ ಶೇ. 81, ಕಂಪ್ಯೂಟರ್ ಆಫೀಸ್ ಆಟೋಮೇಷನ್ ವಿಭಾಗದಲ್ಲಿ ಪದ್ಮಶ್ರೀ, ಹಶಿಮುದ್ದೀನ ಹುಬ್ಬಳ್ಳಿ, ವಿಜಯಲಕ್ಷ್ಮಿ ಪೊಲೀಸ್ ಪಾಟೀಲ್ ಶೇ. 77 ಅಂಕ ಪಡೆದಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿ ವಿದ್ಯಾಲಯದ ಫಲಿತಾಂಶವು ಶೇ. 90ರಷ್ಟು ಆಗಿದೆ ಎಂದು ವಿದ್ಯಾಲಯದ ಪ್ರಾಚಾರ್ಯ ಡಾ. ತಯಬಅಲಿ ಅ. ಹೊಂಬಳ ತಿಳಿಸಿದ್ದಾರೆ.