ಬೆರಳಚ್ಚು ಪರೀಕ್ಷೆಗಳ ಫಲಿತಾಂಶ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬೆಂಗಳೂರು ಇವರು 2025ರ ಜನವರಿಯಲ್ಲಿ ನಡೆಸಿದ ಬೆರಳಚ್ಚು ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ಶ್ರೀ ಕಲ್ಮೇಶ್ವರ ಬೆರಳಚ್ಚು ಮತ್ತು ಕಂಪ್ಯೂಟರ್ ವಿದ್ಯಾಲಯವು ಶೇ. 91.5 ಫಲಿತಾಂಶ ಪಡೆದಿದೆ.

Advertisement

ಇಂಗ್ಲೀಷ್ ಬೆರಳಚ್ಚು ಸೀನಿಯರ್ ವಿಭಾಗದಲ್ಲಿ ಜಯಂತಿ ನೀಲಗಾರ ಶೇ. 86.50, ಇಂಗ್ಲೀಷ್ ಬೆರಳಚ್ಚು ಜ್ಯೂನಿಯರ್ ವಿಭಾಗದಲ್ಲಿ ಸುನೀಲ (ಶೆಟ್ಟಿ) ಶೇ.90.50 ಮತ್ತು ಗೌರಿ ಶಿಲ್ಪಿ ಶೇ.89.50 ಅಂಕ ಗಳಿಸಿದ್ದಾರೆ.

ಕನ್ನಡ ಬೆರಳಚ್ಚು ಸೀನಿಯರ್ ವಿಭಾಗದಲ್ಲಿ ಕವಿತಾ ದೊಡ್ಡಮನಿ ಶೇ.75.50, ಕನ್ನಡ ಬೆರಳಚ್ಚು ಜ್ಯೂನಿಯರ್ ವಿಭಾಗದಲ್ಲಿ ಮುಸ್ಕಾನ ಗ.ಮುಲ್ಲಾ ಶೇ.88.0 ಮತ್ತು ಗೌರಿ ಶಿಲ್ಪಿ ಶೇ.86.50 ಅಂಕ ಪಡೆದಿದ್ದಾರೆ. ಉಳಿದಂತೆ ಪ್ರಥಮ ಸ್ಥಾನದಲ್ಲಿ 17 ವಿದ್ಯಾರ್ಥಿಗಳು, ದ್ವಿತೀಯ ಸ್ಥಾನದಲ್ಲಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾಲಯದ ಮಾಲೀಕರು/ ಪ್ರಾಚಾರ್ಯರಾದ ತಯಬಅಲಿ ಅ. ಹೊಂಬಳ ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here