ದೇವನಹಳ್ಳಿ:- ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದಲ್ಲದೆ, ಬಿಟ್ಟುಕಳುಹಿಸಿದ ಪೊಲೀಸರನ್ನೇ ನಿಂದಿಸಿದ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಹಾರುತ್ತಿದ್ದ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಆರೋಪಿ ಉತ್ಕರ್ಷ್ ಗೌತಮ್, ಹೋಗಲಿ ಎಂದು ಬಿಟ್ಟು ಕಳುಹಿಸಿದ ಬೆಂಗಳೂರು ಪೊಲೀಸರನ್ನೇ ‘ಬಸ್ಟರ್ಡ್ಸ್’ ಎಂದು ನಿಂದಿಸಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಎಕ್ಸ್ (X) ಖಾತೆಯಲ್ಲಿ ಪೊಲೀಸರ ವಿರುದ್ಧ ಸುಳ್ಳು ಆರೋಪ ಮಾಡಿ ಪೋಸ್ಟ್ ಹಾಕಿದ್ದ ಆರೋಪಿಯ ವಿರುದ್ಧ ಕೆಂಪೇಗೌಡ ಏರ್‌ಪೋರ್ಟ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
FIR ಬೆನ್ನಲ್ಲೇ ಆರೋಪಿ ಎಸ್ಕೇಪ್ ಆಗಿದ್ದು, ಆತನ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ.



