ತೇಜಸ್ವಿ ಸೂರ್ಯ ವಿರುದ್ಧ FIR: ಸಚಿವ ಡಾ. ಜಿ ಪರಮೇಶ್ವರ್‌ ಹೇಳಿದ್ದೇನು..?

0
Spread the love

ಬೆಂಗಳೂರು: ಬಿಜೆಪಿ ನಾಯಕರಿಗೆ ಇದೊಂದು ಅಭ್ಯಾಸ ಆಗಿಬಿಟ್ಡಿದೆ ಎಂದು ತೇಜಸ್ವಿ ಸೂರ್ಯ ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕಟವಾಗಿದ್ದ ವರದಿಯನ್ನು ತಮ್ಮ ಎಕ್ಷ್‌ ಖಾತೆಯಲ್ಲಿ ಹಂಚಕೊಂಡಿದ್ದರ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,

Advertisement

ಬಿಜೆಪಿ ನಾಯಕರಿಗೆ ಇದೊಂದು ಅಭ್ಯಾಸ ಆಗಿಬಿಟ್ಡಿದೆ. 2 ವರ್ಷದ ಹಿಂದೆ ಆಗಿರುವ ಘಟನೆಯನ್ನು ಇವಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡ್ತಿದ್ದಾರೆ. ಕೆಲವು ಹೊರದೇಶದಲ್ಲಿ ಆಗಿರುವ ಘಟನೆಯನ್ನ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದರು.

ಇನ್ನೂ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿಚಾರಣೆ ಕುರಿತಾಗಿ ಬಿಜೆಪಿ ಟೀಕೆಗೆ ಉತ್ತರಿಸಿದ ಅವರು, ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಹೋಗಿದ್ದಾರೆ. ಅಂದಾಜು ಸಮಯ ಇಟ್ಟುಕೊಂಡು ಹೋಗಿದ್ದಾರೆ. ಸಿಎಂ ಟೈಂ ಫಿಕ್ಸ್ ಮಾಡೊಣಕ್ಕೆ ಆಗುತ್ತಾ? ಬಿಜೆಪಿ ಅವರನ್ನು ಕೇಳಿ ಸಮಯ ಫಿಕ್ಸ್ ಮಾಡೋಕ್ಕೆ ಆಗುತ್ತಾ? ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here