ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ: ನಿರ್ದೇಶಕ ಎಸ್.ನಾರಾಯಣ್ ವಿರುದ್ಧ ಎಫ್ಐಆರ್ ದಾಖಲು

0
Spread the love

ಕನ್ನಡ ಚಿತ್ರರಂಗದ ಹಿರಿಯ ನಟ ಕಂ ನಿರ್ದೇಶಕ ಎಸ್​. ನಾರಾಯಣ್ ವಿರುದ್ಧ ಎಫ್‌ ಐ ಆರ್‌ ದಾಖಲಾಗಿದೆ. ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪದಡಿ ದೂರು ದಾಖಲು ಮಾಡಿದ್ದು, ಎಫ್​ಐಆರ್ ರಿಜಿಸ್ಟರ್‌ ಆಗಿದೆ.

Advertisement

2021ರಲ್ಲಿ ಎಸ್.ನಾರಾಯಣ್​ ಪುತ್ರ ಪವನ್ ಹಾಗೂ ಪವಿತ್ರಾ ಮದುವೆ ಅದ್ದೂರಿಯಾಗಿ ನಡೆದಿತ್ತು. ಆದರೆ ಇದೀಗ ಪವಿತ್ರಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು ಮಾವ ಎಸ್‌ ನಾರಾಯಣ್‌ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ನಾರಾಯಣ್ ಅವರ ಪತ್ನಿ ಭಾಗ್ಯವತಿ ಹಾಗೂ ಮಗ ಪವನ್ ವಿರುದ್ಧ ಪವಿತ್ರಾ ದೂರು ನೀಡಿದ್ದಾರೆ. ಮದುವೆಯಲ್ಲಿ ವರದಕ್ಷಿಣೆ ನೀಡಿದ್ದರು ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದರೆ ಎಂದು ಪವಿತ್ರಾ ದೂರು ನೀಡಿದ್ದಾರೆ.

ಪವನ್‌ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ನಾನೇ ನಾನೇ ಕೆಲಸ ಮಾಡಿ ಮನೆ ನಡೆಸುತ್ತಿದ್ದೆ. ಈ ವೇಳೆ ‘ಕಲಾಸಾಮ್ರಾಟ್ ಟೀಂ ಅಕಾಡೆಮಿ’ ಆರಂಭಿಸಲು ಹಣಕ್ಕೆ ಬೇಡಿಕೆ ಇಡಲಾಯಿತು. ಆಗ ನಾನು ತಾಯಿಯ ಒಡವೆಯನ್ನು ಅಡವಿಟ್ಟು ಹಣ ಕೊಟ್ಟಿದ್ದೆ. ಆದರೆ ಕಲಾಸಾಮ್ರಾಟ್ ಟೀಂ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಯಿತು’ ಎಂದು ಪವಿತ್ರಾ ಹೇಳಿದ್ದಾರೆ. ಬಳಿಕ ಪವಿತ್ರಾ ತಮ್ಮ ಹೆಸರಲ್ಲೇ 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್​ಗೆ ನೀಡಿದ್ದರಂತೆ. ಆದರೆ, ಆದರೆ ಈಗ ಪವಿತ್ರಾ ಅವರನ್ನೇ ಮನೆಯಿಂದ ಹೊರಹಾಕಿದ್ದಾರೆ ಎಂದು ಪವಿತ್ರಾ ಆರೋಪ ಮಾಡಿದ್ದಾರೆ.

ಇನ್ನೂ ತಮ್ಮ ಮೇಲೆ ಬಂದಿರುವ ವರದಕ್ಷಿಣೆ ಕಿರುಕುಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಸ್‌ ನಾರಾಯಣ್‌, ‘ಪವಿತ್ರಾ ಮನೆ ಬಿಟ್ಟು ಹೋಗಿ 10 ತಿಂಗಳಾಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಎಂದು ಹೇಳಿದರೆ ನಾನು ಅವರ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆ ಆಗಿ ಒಂದು ತಿಂಗಳ ಬಳಿಕ ಮಾತುಕತೆಯೇ ನಿಂತು ಹೋಯಿತು. ವಯಸ್ಸು, ವ್ಯಕ್ತಿತ್ವ ಎರಡಕ್ಕೂ ಪವಿತ್ರಾ ಬೆಲೆ ಕೊಡುತ್ತಿರಲಿಲ್ಲ’ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here