ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾದ ವಿಚಾರ: ಸಿದ್ದರಾಮಯ್ಯ ಏನ್ ಹೇಳಿದ್ರೂ ಗೊತ್ತಾ!?

0
Spread the love

ಮೈಸೂರು:- ಸಿಎಂ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾದ ವಿಚಾರವಾಗಿ ನಗರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Advertisement

ಕಾನೂನು ಹೋರಾಟದ ವಿಚಾರವನ್ನ ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ. ಕಾನೂನು ಸಲಹೆಗಾರ ಪೊನಣ್ಣ ನನ್ನನ್ನು ಭೇಟಿಯಾಗಿದ್ದಾರೆ ಅಷ್ಟೇ. ನಾನು ಅವರ ಬಳಿ ಯಾವ ಚರ್ಚೆಗಳನ್ನು ಮಾಡಿಲ್ಲ. ಅವರು ತಮ್ಮ ಕ್ಷೇತ್ರಕ್ಕೆ ಹೋಗುತ್ತಿದ್ದರು. ಹೀಗಾಗಿ ಸೌಜನ್ಯವಾಗಿ ಬಂದಿದ್ದಾರೆ. ಇವತ್ತು ಮಾಧ್ಯಮಗಳಿಗೆ ಹೇಳುವುದಕ್ಕೆ ನನ್ನ ಬಳಿ ಏನು ಇಲ್ಲ. ನೀವೇ ಏನಾದರೂ ಇದ್ದರೆ ಹೇಳಿ ಎಂದರು.

ಇದೇ ವೇಳೆ ಕುಮಾರಸ್ವಾಮಿ ಆರೋಪಗಳ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿಯ ಈ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ಉತ್ತರ ಕೊಡಬೇಕು ಅಂತ ಎಲ್ಲಿಯೂ ಇಲ್ಲ. ಉತ್ತರ ಕೊಡಲ್ಲ ಎಂದ ಮೇಲೆ ನಾನು ಕೊಡುವುದಿಲ್ಲ. ಮತ್ತೆ ಮತ್ತೆ ಅದನ್ನೇ ನನ್ನ ಬಳಿ ಕೇಳಬೇಡಿ. 8 ಗಂಟೆ ಅವಧಿಯ ಔಟ್ ಪುಟ್ ಏನು ಎಂದು ಕೇಳಿದರೆ? ಅದಕ್ಕೆ ಏನು ಉತ್ತರ ಕೊಡಬೇಕು. ಮಾಧ್ಯಮಗಳಿಗೆ ನಿನ್ನೆಯೇ ಎಲ್ಲಾ ವಿವರಗಳನ್ನು ಕೊಟ್ಟಿದ್ದೇನೆ ಎಂದು ಖಡಕ್ಕಾಗಿ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here