ರಿಯಾಲಿಟಿ ಶೋ ಸ್ವರ್ಧಿ ಕಾರ್ತಿಕ್ ಅಲಿಯಾಸ್ ಹುಲಿ ಕಾರ್ತಿಕ್ ಮೇಲೆ FIR.! ಯಾಕೆ ಗೊತ್ತಾ..?

0
Spread the love

ಬೆಂಗಳೂರು: ಕಿರುತೆರೆ ರಿಯಾಲಿಟಿ ಶೋನಲ್ಲಿ ಗೆದ್ದು ಹಿರಿ ತೆರೆಯಲ್ಲಿ ಮಿಂಚುತ್ತಿದ್ದ ಕಾರ್ತಿಕ್ ಅಲಿಯಾಸ್ ಹುಲಿ ಕಾರ್ತಿಕ್ ಮೇಲೆ ಜಾತಿ ನಿಂದನೆ ಮಾಡಿದ್ದಾನೆಂದು ಎಫ್ ಐ ಆರ್ ದಾಖಲಾಗಿದೆ. ಒಂದು ಸಮುದಾಯವನ್ನ ಹೀಗಳೆಯುವ ರೀತಿಯಲ್ಲಿ ಹುಲಿ ಕಾರ್ತಿಕ್ ಮಾತನಾಡಿದ್ದರು. ಒಂದು ನಿರ್ದಿಷ್ಟ ಸಮುದಾಯದ ಹೆಸರನ್ನು ನೆಗೆಟಿವ್ ಆಗಿ ಬಳಸಿದ್ದರು.

Advertisement

ಈ ಕಾರಣದಿಂದಲೇ ಹುಲಿ ಕಾರ್ತಿಕ್ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಲಾಗಿದೆ. ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ ಅವಾರ್ಡ್’ ಕಾರ್ಯಕ್ರಮದಲ್ಲಿ ಬಳಕೆ ಮಾಡಿದ ಪದವು ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿ ನಿಂದಿಸಿ ಮಾತನಾಡಿದ ನಟನ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ. ಹುಲಿ ಕಾರ್ತಿಕ್ ಅಲ್ಲದೆ ‘ಅನುಬಂಧ’ ಅವಾರ್ಡ್ಸ್​ನ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ,

ನಿರ್ದೇಶಕರ ಮೇಲೂ ಕೇಸ್ ದಾಖಲಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯಾಗಿ A-1 ಹುಲಿ ಕಾರ್ತಿಕ್, A-2 ಅನುಬಂಧ ಸ್ಕ್ರಿಪ್ಟ್  ರೈಟರ್, A-3 ಅನುಬಂಧ ಡೈರೆಕ್ಟರ್, A-4 ನಿರ್ಮಾಪಕನ ವಿರುದ್ದ ದೂರು ದಾಖಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here