ಬೆಂಗಳೂರು: CM ಸಿದ್ದರಾಮಯ್ಯ ವಿರುದ್ಧ FIR ದಾಖಲು ಮಾಡೋ ಪರಿಸ್ಥಿತಿ ಬರುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ಅನಿವಾರ್ಯ ಆದರೆ ಮಾಡಬೇಕು. ಹಿಂದಿನ ಇತಿಹಾಸವನ್ನು ನೋಡಬೇಕಾಗುತ್ತದೆ.
ಹಿಂದಿನ ಸರ್ಕಾರಗಳು ಬೆಂಗಳೂರು ಸುತ್ತಮುತ್ತ ಅವರ ಸಂಸ್ಥೆಗಳಿಗೆ ಜಮೀನು ನೀಡಿದ್ದಾರೆ. ರಾಜ್ಯಾದ್ಯಂತ ಜಮೀನು ನೀಡಿದ್ದಾರೆ. ಚರ್ಚೆ ಆಗೋದಾದ್ರೆ ತನಿಖೆ ಆಗೋದಾದ್ರೆ ಎಲ್ಲರದ್ದೂ ಆಗಲಿ. ಕೇವಲ ಖರ್ಗೆಯವರ ವಿಚಾರ ಮಾತ್ರ ಯಾಕೆ ಚರ್ಚೆ? ಎಲ್ಲದರ ಬಗ್ಗೆಯೂ ಚರ್ಚೆ ಆಗಲಿ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ನೀಡಿರುವ ವಿಚಾರವಾಗಿ ಮಾತನಾಡಿ, ರಾಜ್ಯಪಾಲರ ಅಂಗಳದಿಂದ ಅದಕ್ಕೂ ಸೂಚನೆ ಬಂದರೆ ಮತ್ತೆ ಹೋರಾಟ ಮಾಡುತ್ತೇವೆ. ಏನು ಮಾಡುವುದಕ್ಕೆ ಆಗುವುದಿಲ್ಲ. ನಮ್ಮ ಹೋರಾಟ ನಡೆಯುತ್ತದೆ. ರಾಜ್ಯಪಾಲರಿಂದ ಏನು ನಿರ್ಧಾರ ಬರುತ್ತದೆ ಏನು ಆದೇಶ ಕೊಡಲಿದ್ದಾರೆ ನೋಡೋಣ ಎಂದರು.