ಬಳ್ಳಾರಿ:- ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಡ್ಯಾಂ ಬಳಿಯ ಗುಡ್ಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮ, ಬಿಸಿಲಿನ ಝಳಕ್ಕೆ ಕಾದು ಕೆಂಡವಾಗಿದ್ದ ಟಿಬಿ ಡ್ಯಾಂ ಬಳಿಯ ಗುಡ್ಡ ಧಗಧಗನೆ ಹೊತ್ತಿ ಉರಿದಿದೆ.
Advertisement
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಈ ಕುರಿತು ಪರಿಶೀಲಿಸಿರುವ ಅರಣ್ಯಾಧಿಕಾರಿಗಳು ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಅಥವಾ ಬೀಡಿ, ಸಿಗರೇಟ್ ಕಿಡಿ ಬಿದ್ದಿರಬಹುದೆಂದು ಶಂಕಿಸಿದ್ದಾರೆ.
ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.