ಆಂಧ್ರ:- ವಿಶಾಖಪಟ್ಟಣ ಸಮೀಪದ ಅನಕಪಲ್ಲಿ ಜಿಲ್ಲೆಯಲ್ಲಿ ಟಾಟಾನಗರ–ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.
ನಸುಕಿನ ಜಾವ ಎಲಮಂಚಿಲಿ ರೈಲು ನಿಲ್ದಾಣದ ಬಳಿ ಬಿ1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಎಂ1 ಹಾಗೂ ಬಿ2 ಬೋಗಿಗಳಿಗೆ ಹರಡಿದೆ. ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ರೈಲನ್ನು ತಕ್ಷಣ ನಿಲ್ಲಿಸಿ, ಬೆಂಕಿ ಹಿಡಿದ ಬೋಗಿಗಳನ್ನು ಬೇರ್ಪಡಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಆದರೆ ದುರಾದೃಷ್ಟವಶಾತ್ ಬಿ1 ಕೋಚ್‌ನಲ್ಲಿ ಚಂದ್ರಶೇಖರ್ ಸುಂದರಂ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಘಟನೆಯ ವೇಳೆ ಬೋಗಿಗಳಲ್ಲಿ ನೂರಾರು ಪ್ರಯಾಣಿಕರು ಇದ್ದರೂ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ರೈಲ್ವೇ ಅಧಿಕಾರಿಗಳು ಅಗ್ನಿ ಅವಘಡದ ಕಾರಣಗಳ ಕುರಿತು ತನಿಖೆ ಆರಂಭಿಸಿದ್ದಾರೆ.



